ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ವ್ಯಕ್ತಿವಿಕಸನ ಸಂಸ್ಥೆ [ರಿ.] ವತಿಯಿಂದ ಗ್ರಾಮೀಣ ಕ್ರೀಡೋತ್ಸವ






ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಕೌಶಲ್ಯವನ್ನು ಬೆಳೆಸಲು ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸುತ್ತಿದೆ. ಹಗ್ಗ ಜಗ್ಗಾಟ, ವಾಲೀಬಾಲ್, ಕೋ ಕೋ, ಮಂದಗತಿಯ ಸೈಕಲ್ ತುಳಿಯುವುದು ಮತ್ತು ರಂಗೋಲಿ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ, ಆಸಕ್ತರು ಮುಂಗಡವಾಗಿ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಹಾಗು ಕೊನೆಯ ದಿನಾಂಕ 24/01/2018. ಯಾವುದೇ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿರುತ್ತದೆ. ಈ ಕ್ರೀಡೋತ್ಸವದಲ್ಲಿ ಯಾವುದೇ ನಗದು ಬಹುಮಾನ ಇರುವುದಿಲ್ಲ ಹಾಗೂ ಎಲ್ಲಾ ಶಾಲಾ ಕಾಲೇಜು ಮಕ್ಕಳು, ಎಲ್ಲಾ ವಯೋಮಿತಿಯ ಸಾರ್ವಜನಿಕರಿಗೂ ಮುಕ್ತ ಅವಕಾಶ ಇರುತ್ತದೆ. ನೋಂದಾಯಿಸಿಕೊಳ್ಳಲು ಕರೆ ವಾಟ್ಸಾಪ್ 89511 80019/89712 95960.
Comments