ಸದಾಶಿವ ಆಯೋಗಕ್ಕೆ ವಿರೋಧಿಸಿದರೆ ಪರಮೇಶ್ವರ್ ಗೆ ಪಾಠ: ವೆಂಕಟೇಶಮೂರ್ತಿ
ಕೊರಟಗೆರೆ :- ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಮ್ಮ ಸ್ವ-ಹಿತಕ್ಕಾಗಿ ಸದಾಶಿವ ಆಯೋಗದ ಅನುಷ್ಠಾನಕ್ಕೆ ತಡೆಯಿಡೆಯಲು ಯತ್ನಿಸುತ್ತಿದ್ದಾರೆ ಎಂದು ಸದಾಶಿವ ಆಯೋಗ ಅನುಷ್ಠಾನ ತಾಲೂಕು ಸಂಚಾಲಕ ವೆಂಕಟೇಶಮೂತರ್ಿ ತಿಳಿಸಿದರು. ಪಟ್ಟಣ ದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸದಾಶಿವ ಆಯೋಗ ಅನುಷ್ಠನಕ್ಕೆ ಹಕ್ಕೊತ್ತಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸದಾಶಿವ ಆಯೋಗಕ್ಕೆ ವಿರೋಧಿಸಿದರೆ ಪರಮೇಶ್ವರ್ ಗೆ ತಕ್ಕ ಪಾಠ: ವೆಂಕಟೇಶಮೂರ್ತಿ
ಕೊರಟಗೆರೆ :- ಸದಾಶಿವ ಆಯೋಗ ಅನುಷ್ಠಾನಕ್ಕೆ ತಡಯಾದರೆ ರಾಜಕೀಯವಾಗಿ ಪರಮೇಶ್ವರ್ ಗೆ ತಕ್ಕ ಪಾಠವನ್ನು ಕಲಿಸಲಾಗುತ್ತದೆ ಎಂದು ತಾಲೂಕು ಸಂಚಾಲಕ ವೆಂಕಟೇಶಮೂರ್ತಿ ತಿಳಿಸಿದರು.
ಪಟ್ಟಣ ದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸದಾಶಿವ ಆಯೋಗ ಅನುಷ್ಠನಕ್ಕೆ ಹಕ್ಕೊತ್ತಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಪರಮೇಶ್ವರ್ ಕೇವಲ ಟೊಳ್ಳು ಭರವಸೆಗಳನ್ನು ನೀಡುತ್ತಿದ್ದರೆ ಅವರನ್ನು ಕೊರಟಗೆರೆ ಕ್ಷೇತ್ರದಿಂದ ರಾಜಕೀಯವಾಗಿ ಅತಂತ್ರಗೊಳಿಸಲು ಸಮುದಾಯ ಮುಂದಾಗಲಿದೆ ಎಂದು ಎಚ್ಚರಿಸಿದರು.
ಸದಾಶಿವ ಆಯೋಗ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗಂಗಾಧರಯ್ಯ ಮಾತನಾಡಿ ಮುಖ್ಯಮಂತ್ರಿಗಳೇ ಸ್ವತಃ ವಕೀಲರಾಗಿದ್ದಾರೆ ಕಾನೂನಿನ ಅರಿವಿದೆ ಆಯೋಗದ ವರದಿಯನ್ನು ಪದೇ ಪದೇ ಸುವ ಅವಶ್ಯಕತೆಯಿಲ್ಲ ಅನುಷ್ಠಾನಕ್ಕೆ ಯೋಗ್ಯವಾದಂತಹ ವರದಿಯನ್ನು ಪದೇ ಪದೇ ಪರಾಮಷರ್ಿಸುವುದದರಲ್ಲಿ ಅರ್ಥವಿಲ್ಲ ಎಂದು ಗುಡುಗಿದರು.
ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೇವಲ ಮೂಗಿಗೆ ತುಪ್ಪು ಸುರಿಯುವಂತಹ ತಂತ್ರಗಳನ್ನು ಬಳಸುತ್ತಿದ್ದಾರೆ ಇದು ನಿಲ್ಲಬೇಕು ಚುನಾವಣೆ ಹತ್ತಿರದಲ್ಲಿದೆ ಸೂಕ್ತ ಸರಿಯಾದ ನಿರ್ಧಾರಗಳನ್ನು ತೆಗೆದುಕೋಳ್ಳಬೇಕು ಉಗ್ರ ಹೋರಾಟ ಮಾಡಬೇಕಾಗತ್ತದೆ ಎಂದು ಹೇಳಿದರು.
ಸಭೆಯಲ್ಲಿ ಎಸ್ಸಿ/ಎಸ್ಟಿ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಸದಸ್ಯರುಗಳಾದ ಹನುಮಂತರಾಯಪ್ಪ, ಜಿಲ್ಲಾ ಮಾದಿಗ ದಂಡೋರದ ಯುವ ಅಧ್ಯಕ್ಷ ಜೆಟ್ಟಿಅಗ್ರಹಾರ ನಾಗರಾಜು, ದಲಿತ ಸೇನೆಯ ತಾಲೂಕು ಅಧ್ಯಕ್ಷ ಆನಂದ್, ಮುಖಂಡರಾದ ದೊಡ್ಡಯ್ಯ, ನಾಗರಾಜು, ಜಯಣ್ಣ, ಸಿದ್ದೇಶ್ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments