ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದೇನೆ: ಮಾಜಿ ವಿಧಾನ ಸಭಾಪತಿ: ಕೃಷ್ಣ
ಕೊರಟಗೆರೆ( ಜ.14):- ರಾಜಕಾರಣಿಗಳು ಕೆಡಲು ಮತದಾರರೇ ಕಾರಣವಾಗುತ್ತಿದ್ದಾನೆ ಮತಯಾಚನೆ ಬಂದಾಗ ಹಣ ಕೇಳಿ ರಾಜಕಾರಣಿಗಳನ್ನು ಭ್ರಷ್ಟರಾಗಲು ವೇಧಿಕೆ ಕಲ್ಪಿಸಿಕೊಡುತ್ತಿದ್ದಾರೆ ಎಂದು ಮಾಜಿ ವಿಧಾನ ಸಭೆ ಸಭಾಪತಿ ಕೃಷ್ಣ ಎಂದರು.
ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದೇನೆ: ಮಾಜಿ ವಿಧಾನ ಸಭಾಪತಿ: ಕೃಷ್ಣ
ರಾಜಕೀಯ ಪಕ್ಷಗಳು ಗೆಲ್ಲೋರಿಗೆ ಟಿಕೆಟ್ ಕೊಡುತ್ತೇವೆ ಎಂದರೆ ಅದರರ್ಥ ಲೂಟಿಕೋರರಿಗೆ ನೀಡುತ್ತೇನೆ ಎನ್ನೋದು... ಯುವಕರು ಪಕ್ಷಕ್ಕಿಂತ ವ್ಯಕ್ತಿಗೆ ಪ್ರಾಮುಖ್ಯತೆ ಕೊಡಲು ಸಲಹೆ
ಕೊರಟಗೆರೆ( ಜ.14):- ರಾಜಕಾರಣಿಗಳು ಕೆಡಲು ಮತದಾರರೇ ಕಾರಣವಾಗುತ್ತಿದ್ದಾನೆ ಮತಯಾಚನೆ ಬಂದಾಗ ಹಣ ಕೇಳಿ ರಾಜಕಾರಣಿಗಳನ್ನು ಭ್ರಷ್ಟರಾಗಲು ವೇಧಿಕೆ ಕಲ್ಪಿಸಿಕೊಡುತ್ತಿದ್ದಾರೆ ಎಂದು ಮಾಜಿ ವಿಧಾನ ಸಭೆ ಸಭಾಪತಿ ಕೃಷ್ಣ ಎಂದರು.
ನಾವು ನಮ್ಮವರು ಎಂಬ ಹೆಸರಿನಡಿಯಲ್ಲಿ ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ 'ಸಂಕ್ರಾಂತಿ ಸಂಭ್ರಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಪಕ್ಷಗಳೂ ಸಹ ಗೆಲ್ಲೋರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳುತ್ತಿವೆ ಇದರ ಅರ್ಥ ಲೂಟಿಕೋರರಿಗೆ ಕೊಡುವುದು ಎಂದರ್ಥ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ತನ್ನ ಮತದ ಮೌಲ್ಯವನ್ನು ಮಾರಾಟಕ್ಕಿದ್ದು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಬಂಡವಾಳ ಮಾಡಿಕೊಳ್ಳುತ್ತಿರುವುದರ ಬಗ್ಗೆ ಸಿಡಿಮಿಡಿಗೊಂಡರು.
ಜಾತಿಯಿಲ್ಲದೇ ದೇಶದಲ್ಲಿ ರಾಜಕಾರಣವೇ ಇಲ್ಲದ ರೀತಿಯಲ್ಲಿ ಪರಿಸ್ಥಿತಿ ನಿಮರ್ಾಣವಾಗಿದ್ದು ಇದು ಕೊನೆಯಾಗಬೇಕು ರೀತಿ-ನೀತಿಗಳು ಜಾತಿಗಿಂತ ಮಿಗಿಲಾಗಬೇಕು ಆಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದರು.
ರೈತರು ಸಲಮನ್ನಾಕ್ಕಾಗಿ ಕಾಯಬಾರದು, ನಮ್ಮ ದೇಶನ ಬೆನ್ನೆಲುಬು ರೈತ ಇಂದು ಅಸಂಘಟಿತರಾಗುತ್ತಿದ್ದಾನೆ ಹಿಂದೆ ರೈತ ಸಂಘಗಳು ಶಕ್ತಿಯುತವಾಗಿದ್ದವು ಆದರೆ ಇಂದು ಹಿಬ್ಬಾಗಗಳಾಗಿ ಅಸಂಘಟಿತವಾಗಿವೆ ಎಂದು ವಿಷಾಧಿಸಿದರು.
ಹಿಂದೆ ಪ್ರತಿಯೊಂದು ಪಕ್ಷದಲ್ಲಿಯೂ ರೈತರ ಪರವಾಗಿ ಹೋರಾಡುವಂತಹ ಮುಖಂಡರು ಇರುತ್ತಿದ್ದರು ರೈತರ ಹೋರಾಟಗಳನ್ನು ಮಾಡಿಕೊಂಡೇ ದೇವೇಗೌಡರು ಪ್ರಧಾನ ಮಂತ್ರಿಯಾದರು ಆದರೆ ಇಂದು ಯಾರೊಬ್ಬರೂ ಯಾವೊಂದು ಪಕ್ಷದಲ್ಲೂ ರೈತರ ಪರ ಹೋರಾಡುವಂತಹ ಮುಖಂಡರಿಲ್ಲ ಎಂದು ಹೇಳಿದರು.
ಲಕ್ಷ ಲಕ್ಷ ರೈತರು ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಆಗ ಮಾತ್ರ ಹೋರಾಟಕ್ಕೆ ಫಲ ಸಿಗುತ್ತದೆ ಇಲ್ಲವಾದಲ್ಲಿ ಹೋರಾಟಗಳು ಕಳಾಹೀನವಾಗುತ್ತವೆ ಹಳ್ಳಿಗಳ್ಳಲ್ಲಿರವಂತಹ ಯುವಕರು ರಾಜಕೀಯ ಮುಖಂಡರ ಹಿಂಬಾಲಕರಾಗದೇ ನೇಗಿಲ ಸೇವಕಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ನಾನೂ ಸಕ್ರಿಯ ರಾಜಕೀಯದಿಂದ ನಿವೃತ್ತನಾಗಿದ್ದೇನೆ:-
ವ್ಯವಸ್ಥೆ ಆದರ್ಶಕ್ಕೆ ಪೂರಕವಾಗಿಲ್ಲ ಅದೇ ರೀತಿ ವಯಸ್ಸಿನ ಆಧಾರದ ಹಿನ್ನೆಲೆಯಲ್ಲಿ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಹೊಂದಿದ್ದೇನೆ.
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ:- ಮತದಾರರು ಪಕ್ಷಕ್ಕೆ ಮಣಿ ಹಾಕಲು ಹೋಗಬೇಡಿ ಯಾರು ನಿಮಗೆ ಸಿಗುತ್ತಾನೋ.. ನಿಮ್ಮ ಕಷ್ಟಗಳಿಗೆ ಸದಾ ಕಾಲ ಸ್ಪಂಧಿಸುತ್ತಾನೋ... ಅಂತಹ ವ್ಯಕ್ತಿಗೆ ಮತಹಾಕಿ ಯಾವುದೋ ಪಕ್ಷ ನಿಷ್ಠೆ ಎನ್ನುವುದಕ್ಕೆ ಪ್ರಾಧಾನ್ಯತೆ ಕೊಡಬೇಡಿ.
ದೇವೇಗೌಡ ಪ್ರಧಾನಿಯಾದ್ರು:- ದೇಶದಲ್ಲಿ ರೈತರ ಪರ ಹೋರಾಟ ಮಾಡುವಂತಹ ನಾಯಕರಿದ್ದರೂ ಈ ನಿಟ್ಟಿನಲ್ಲಿ ಕನರ್ಾಟಕಲ್ಲಿ ರೈತರ ಪರ ಹೋರಾಟ ಮಾಡಿದ ರೈತ ದೇಶದ ಪ್ರಧಾನಿಯಾಗಿದ್ದರು ಆದರೆ ಇಂದು ಯಾವೊಂದು ಪಕ್ಷದಲ್ಲೂ ರೈತ ಪರ ಹೋರಾಟ ಮಾಡುವಂತಹ ನಾಯಕರಿಲ್ಲ ಎಂದು ವಿಷಾದಿಸಿದರು.
ರಸ್ತೆಗಳೇ ಕಣಗಳು :
ರೈತರು ಸೋಮಾರಿಗಳಾಗಿದ್ದಾರೆ ಹಿಂದ ಕಣ ಮಾಡುತ್ತಿದ್ದ ರೈತರು ಇಂದು ರಸ್ತೆಗಳನ್ನೇ ಕಣ ಮಾಡಿಕೊಂಡಿದ್ದಾರೆ ಕಣ ಮಾಡುವಂತಹ ಪದ್ಧತಿಗೆ ವಿಧಾಯ ಹೇಳಿದ್ದು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದರು.
ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಅನುಭವಿ ರೈತ ವಿದ್ಯಾವಂತನಲ್ಲದಿದ್ದರೂ ಅತೀ ಹೆಚ್ಚು ವಿದ್ಯಾವಂತರಾಗಿ ಡಾಕ್ಟರೇಟ್ ಪಡೆದಂತಹ ವಿಜ್ಞಾನಿಗಿಂತಲೂ ಬುದ್ದಿವಂತನಾಗಿರುತ್ತಾನೆ, ಇಂದು ನಗರ ಜೀವನಕ್ಕೆ ಮಾರು ಹೋಗಿ ಬದುಕನ್ನು ಯಾತ್ರಿಕವಾಗಿಸಿಕೊಂಡಿದ್ದೇವೆ ಇದರಿಂದ ಹೊರಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎರಡು ಜೊತೆ ಉತ್ತಮ ರಾಸುಗಳಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನ, ಹೋಬಳಿ ಮಟ್ಟದ ಸ್ಪಧರ್ೆಯಲ್ಲಿ ಸಂಗೀತ, ನೃತ್ಯ, ಏಕಪಾತ್ರ ಅಭಿನಯ, ಕೋಲಾಟ, ಜಾನಪದಗೀತೆ, ಭಾವಗೀತೆ, ರಂಗಗೀತೆ, ಯಕ್ಷಗಾನ, ಸೋಬಾನೆ ಪದ, ಗೀಗೀ ಪದ ರಂಗೋಲಿ, ಚಿತ್ರಕಲೆ ಸ್ಪಧರ್ೆ, ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಭಾ ಪರುಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು.
ಕಾರ್ಯಕರಮದಲ್ಲಿ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ತಾಲೂಕು ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಜಯಮ್ಮ, ತಾ.ಪಂ ಉಪಾಧ್ಯಕ್ಷೆ ನರಸಮ್ಮ,ಸದಸದ್ಯರಾದ ಜ್ಯೋತಿ, ಸುಮಾ, ಬುಕ್ಕಪಟ್ಟಣ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಮಹಿಳಾ ಜಿಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯದಶರ್ಿ ಕವಿತಾ, ಕೇಸರಿ ಸೇನೆ ಅಧ್ಯಕ್ಷ ನಾಗರಾಜು,ವಡ್ಡಗೆರೆ ಗ್ರಾ.ಪಂ ಅಧ್ಯಕ್ಷೆ
Comments