ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ವಿದ್ಯಾಸಂಸ್ಥೆ [ರಿ.] ದಿನಾಂಕ ೧೯-೧-೨೦೧೮ನೇ ಶುಕ್ರವಾರ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಸುವರ್ಣಮಹೋತ್ಸವ ಸಂಭ್ರಮ

14 Jan 2018 6:08 PM |
611 Report

ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ವಿದ್ಯಾಸಂಸ್ಥೆ [ರಿ.] ಇವರು ೧೯-೧-೨೦೧೮ನೇ ಶುಕ್ರವಾರ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಸುವರ್ಣಮಹೋತ್ಸವ ಸಂಭ್ರಮ ಆಚರಿಸಲಿದ್ದಾರೆ. ಬೆಳಿಗ್ಗೆ ೧೦ಘಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ತನ್ವೀರ್ ಸೇಠ್ ರವರು, ಪ್ರಾಥಮಿಕ ಮತ್ತು ಫ್ರೌಡಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ. ಮಾಡಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ವೆಂಕಟರಮಣಯ್ಯ, ಶಾಸಕರು. ಪ್ರೊ. ಟಿ. ಕೆಂಪರಾಜು, ಕುಲಪತಿಗಳು, ಬೆಂ.ಉತ್ತರವಿಭಾಗ, ಕೋಲಾರ. ಶ್ರೀ ಶ್ರೀವತ್ಸ, ಅಧ್ಯಕ್ಷರು. ತಾಲ್ಲೂಕು ಪಂಚಾಯತಿ. ದೊಡ್ಡಬಳ್ಳಾಪುರ. ಶ್ರೀ ತ.ನ. ಪ್ರಭುದೇವ್, ಅಧ್ಯಕ್ಷರು. ನಗರಸಭೆ, ದೊಡ್ಡಬಳ್ಳಾಪುರ. ಆಗಮಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್. ಶಂಕರಯ್ಯ ಅಧ್ಯಕ್ಷರು. ಕೊಂಗಾಡಿಯಪ್ಪ ವಿದ್ಯಾಸಂಸ್ಥೆ. ವಹಿಸಲಿದ್ದಾರೆ.

ಸಂಜೆ ೪ ಘಂಟೆಗೆ ನಡೆಯುವ ಸಮಾರೋಪ ಸಮಾರಂಭದ ಭಾಷಣವನ್ನು ಡಾ. ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಆರ್.ಜಿ.ವೆಂಕಟಾಚಲಯ್ಯ, ಮಾಜಿ ಶಾಸಕರು, ಶ್ರೀ ಜೆ, ನರಸಿಂಹಸ್ವಾಮಿ, ಮಾಜಿ ಶಾಸಕರು, ಶ್ರೀ ವೈ. ನಾಗರಾಜ್, ಪೋಲೀಸ್ ಉಪಾಧೀಕ್ಷಕರು, ದೊಡ್ಡಬಳ್ಳಾಪುರ ವಿಭಾಗ, ಶ್ರೀ ಡಿ.ಎಂ. ಚಂದ್ರಶೇಖರ್, ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ.

 

Edited By

Ramesh

Reported By

Ramesh

Comments