ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಎಚ್ ಡಿಕೆ
ರಾಜ್ಯ ಗಣಿ ಇಲಾಖೆಯಿಂದ 2062 ಕೋಟಿ ಹಗರಣ ನಡೆದಿದೆ, ಇದಕ್ಕೆ ಮುಖ್ಯಮಂತ್ರಿಗಳ ಕಚೇರಿಯನ್ನು ಬಳಸಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತೊಡೆತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರೂ, ಆದರೆ ಅವರ ಸರ್ಕಾರದಲ್ಲಿಯೂ ರಾಮನ ಲೆಕ್ಕ ಕೃಷ್ಣನ ಲೆಕ್ಕಾಚಾರದ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲಾ ಪಕ್ಕಾ ದಾಖಲಾತಿ ಸಮೇತ ಸರ್ಕಾರದ ಅಸಲಿ ಮುಖವನ್ನು ತಮ್ಮ ಮುಂದೆ ಇಡುವುದಾಗಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು, ಮೈಸೂರಿನ ಮಿನರಲ್ಸ್ನಲ್ಲಿ ಭಾರಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಮೇಲೆ ಭಾರಿ ಪ್ರಮಾಣದ ಅದಿರು ಅಕ್ರಮ ನಡೆದಿದೆ ಎಂಬ ಆರೋಪದ ಬೃಹತ್ ಬಾಂಬ್ ಸಿಡಿಸಿದ್ದಾರೆ.ಟೆಂಡರ್, ಅಗ್ರಿಮೆಂಟ್ ಇಲ್ಲದೆಯೇ 3 ಕಂಪೆನಿಗಳಿಗೆ ಸಂಡೂರು ಬಳಿಯ ಸುಬ್ಬರಾಯನಹಳ್ಳಿ ಬಳಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ, ಈ ಕಂಪೆನಿಗಳು ನಿಯಮಕ್ಕೆ ವಿರುದ್ಧವಾಗಿ 30 ಲಕ್ಷ ಟನ್ ಅದಿರು ಉತ್ಖನನ ಮಾಡಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಎಲ್ಲಾ ಅಕ್ರಮಗಳು ಅಧಿಕಾರಿ ತುಷಾರ್ ಅವರ ಸಮಯದಲ್ಲೇ ಆಗಿದ್ದು, ಎಲ್ಲಾ ಅಕ್ರಮಗಳಿಗೂ ಸಿಎಂ ಕಚೇರಿಯ ಬೆಂಬಲ ಇದೆ, ಸಿಎಂ ಕಚೇರಿಯಲ್ಲಿಯೇ ಸುಳ್ಳು ದಾಖಲೆಗಳನ್ನು ತಯಾರಿಸಲಾಗಿದೆ, ಹೀಗಾಗಿ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈ ಅಕ್ರಮದ ಬಗ್ಗೆ ತನಿಖೆಗೆ ಮುಂದಾಗಿದ್ದ ಅಧಿಕಾರಿ ಹೇಮಲತಾ ಅವರನ್ನು ವರ್ಗಾವಣೆ ಮಾಡಲಾಯಿತು ಅಷ್ಟೆ ಅಲ್ಲದೆ 3 ವರ್ಷದಲ್ಲಿ 8 ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ, ಭ್ರಷ್ಟಾಚಾರವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹಿರಿಯ ಅಧಿಕಾರಿಗಳ ಸಹಾಯ ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.
Comments