‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ 28 ಮಾಲ್‌ಗಳಲ್ಲಿ ರಿಲೀಸ್ ..!!

12 Jan 2018 5:24 PM | Entertainment
36 0 Report

ರಾಜ್ಯಾದ್ಯಂತ ಇಂದು ಮುಂಜಾನೆ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ ರಿಲೀಸ್ ಆಗಿದೆ. ಇದಕ್ಕೂ ಮೊದಲು ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳಿಗಾಗಿ ಬೆಂಗಳೂರು ಮತ್ತು ಮೈಸೂರಿನ 28 ಮಾಲ್‌ಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಲ್ಲವೂ ಹೌಸ್ ಫುಲ್ ಶೋ ಆಗಿದೆ. ಇದರ ಮಧ್ಯೆ ಇಂದೂ ಸಹ ಬಿಡುಗಡೆಯಾದ 80ರಲ್ಲಿ ಹೆಚ್ಚಿನ ಥಿಯೇಟರ್‌ಗಳು ‘ತುಂಬಿದ ಗೃಹ’ ಪ್ರದರ್ಶನ ಕಂಡಿದೆ.

ಅಭಿಮಾನಿಗಳಿಗೆ ನೋಗ್‌ರಾಜ್ ಎಂಬ ಪೊಲಿಟಿಷಿಯನ್‌ನ ಹಂಬಲ್‌ನೆಸ್ ಇಷ್ಟವಾಗಿದೆ. ಆದರೆ ಹಲವು ಶೋಗಳನ್ನು ಏರ್ಪಡಿಸುವ ಮೂಲಕ ಬಾಲಿವುಡ್, ಹಾಲಿವುಡ್‌ಗಳಲ್ಲಿದ್ದ ಸಂಪ್ರದಾಯವನ್ನು ಪುಷ್ಕರ್-ಹೇಮಂತ್-ರಕ್ಷಿತ್ ಜೋಡಿ ಕನ್ನಡಕ್ಕೂ ಪರಿಚಯಿಸಿದೆ. ಇಷ್ಟು ದಿನ ಸೆಲೆಬ್ರಿಟಿಗಳಿಗಾಗಿ ಮಾತ್ರ ನಡೆಯುತ್ತಿದ್ದ ಪ್ರೀಮಿಯರ್ ಶೋವನ್ನು ಈಗ ಅಭಿಮಾನಿಗಳಿಗೂ ತೋರಿಸುವ ಮಟ್ಟಕ್ಕೆ ಬಂದಿದೆ. ಇದು ಹೊಸ ಟ್ರೆಂಡ್ ಆಗಿದ್ದು ಮುಂದಿನ ದಿನಗಳಲ್ಲಿ ಹೊಸ ರೂಪ ಪಡೆದುಕೊಂಡರೂ ಅಚ್ಚರಿ ಇಲ್ಲ.

Edited By

Shruthi G

Reported By

Madhu shree

Comments

Upload

Upload News

Create

Create Community