ದೊಡ್ಡಬಳ್ಳಾಪುರ ತಾಲ್ಲೂಕು ಕೊನಘಟ್ಟ ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಮರ್ಥ ಭಾರತ ವತಿಯಿಂದ ವಿವೇಕಾನಂದ ಜಯಂತಿ ಆಚರಣೆ
ಸಮರ್ಥ ಭಾರತ ವತಿಯಿಂದ ಕೊನಘಟ್ಟ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಿ ವಿವೇಕ ಬ್ಯಾಂಡ್ ಧರಿಸಲಾಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪ್ರವೀಣ್ ಪಠವರ್ಧನ್ ಭಾಗಿಯಾಗಿ ವಿವೇಕಾನಂದರ ಮೌಲ್ಯವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ನಾಗರೀಕರಾಗ ಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಶಿಕ್ಷಕರಾದ ನಾಗಪ್ಪಗೌಡ ವಹಿಸಿದ್ದರು ಕಾರ್ಯಕ್ರಮದಲ್ಲಿ ಸಮರ್ಥಭಾರತ ವತಿಯಿಂದ ಲೀಲಾಮಹೇಶ್ ಹಾಗೂ ಲೋಕೇಶ್ ನಾಗಸಂದ್ರ, ಚಂದ್ರಶೇಖರ್ ಮತ್ತು ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments