ನಗರಸಭೆವತಿಯಿಂದ ಅಂಗಡಿ,ಹೋಟೆಲ್,ಫ್ಯಾಕ್ಟರಿ ಮಾಲೀಕರಸಭೆ, ಪ್ಲಾಸ್ಟಿಕ್ ಸಂಪೂರ್ಣ ಸ್ಥಗಿತಕ್ಕೆ ಸೂಚನೆ,ಅಂಗಡಿ ಪರವಾನಗಿ ಪಡೆಯಲು ಮನವಿ

12 Jan 2018 9:34 AM |
355 Report

ಕನ್ನಡ ಜಾಗೃತ ಭವನದಲ್ಲಿ ನಗರದ ಅಂಗಡಿಗಳು, ಹೋಟೆಲ್ಗಳು, ಬೇಕರಿ, ಗ್ಯಾರೇಜ್ ಮತ್ತು ಬಣ್ಣದ ಫ್ಯಾಕ್ಟರಿ ಮಾಲಿಕರ ಸಭೆ ಕರೆಯಲಾಗಿತ್ತು. ನಗರಸಭಾ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವ್ ರವರು ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಹಾಗು ಎಲ್ಲಾ ಅಂಗಡಿಗಳ ಮಾಲೀಕರು ನಗರಸಭೆವತಿಯಿಂದ ಪರವಾನಗಿ ಪಡೆದು ವ್ಯಾಪಾರ ವಹಿವಾಟು ನಡೆಸಬೇಕು, ಈ ಕುರಿತು ನಗರಸಭೆಯ ಅಧಿಕಾರಿಗಳಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಜಯಲಕ್ಷ್ಮಿ ನಟರಾಜ್, ನಗರಸಭಾ ಸದಸ್ಯರಾದ ಪ್ರಕಾಶ್ ಮಮತಾ ನಾರಾಯಣಸ್ವಾಮಿ, ಸುಶೀಲ ಮೋಹನ್ ಮತ್ತು ಪರಿಸರವಾದಿ ಗುರುದೇವ್ ಮತ್ತು ನಗರಸಭೆ ಇಂಜಿನಿಯರ್ ಈರಣ್ಣನವರು ಮತ್ತು ಆರೋಗ್ಯ ಅಧಿಕಾರಿಯವರಾದ ಶ್ರೀಜೇಷ್, ಸುಧಾ, ರೂಪ, ಮುಕ್ತಾಂಬ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Edited By

Ramesh

Reported By

Ramesh

Comments