ನನ್ನ ಅಸೆಯೇ ಬೇರೆ: ಬಿಎಸ್ ಯಡ್ಯೂರಪ್ಪ
ಕೊರಟಗೆರೆ :-ದೇಶದಲ್ಲಿ ಅಚ್ಚೇ ದಿನ ಇದೆ ಆದರೆ ರಾಜ್ಯಕ್ಕೆ ಅಚ್ಚೇದಿನ ಬರಬೇಕಾದರೆ ಸಿದ್ದರಾಮಯ್ಯ ಮನೆಗೆ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ಹೇಳಿದರು. ಪಟ್ಟಣ ದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪರಿರ್ತನಾ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ನೀನು ನಿಲ್ಲಿಸು ಸಿದ್ದರಾಮಯ್ಯ... ನಿನ್ನದೇನಿದ್ದರೂ ಇನ್ನು 4 ತಿಂಗಳು ಏನು ಬೇಕಾದರೂ ಮಾತನಾಡಿಕೋ ಆಮೇಲೆ ನೀನು ಸೇರಬೇಕಾದ ಜಾಗಕ್ಕೆ ಸೇರುತ್ತೀಯ ನಾನೇ ನಿನ್ನ ಮತ್ತು ನಿನ್ನ ಸಂಪುಟದ ಅಲವರನ್ನು ಜೈಲಿಗೆ ಕಳೂಹಿಸುತ್ತೇನೆ ನೀನು ಎಸಿಬಿ, ಇಒಡಿ ತನಿಖೆಗಳಲ್ಲಿ ಖುಲಾಸೆಯಾಗಿರುವ ಕೇಸ್ಗಳನ್ನು ಮರು ತನಿಖೆ ನಡೆಸು ನಿಮ್ಮ ಟೀಮನ್ನು ಸೇರಬೇಕಾದ ಜಾಗಕ್ಕೆ ಸೇರಿಸುತ್ತೇನೆ. ಶಾಸಕ ಸುರೇಶ್ ಗೌಡ ಮಾತನಾಡಿ ಪರಂ ರನ್ನು ಸಿದ್ದರಾಮಯ್ಯ ಸೋಲಿಸಿದ್ರೆ.. ಅದೇ ರೀತಿ ಪಿ.ಆರ್ ಸುಧಾಕರ್ರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ ಸೋಲಿಸ್ತಾರೆ... ಇಬ್ಬರೂ ಸಹ ಈ ಬಾರಿ ಮನೆಗೆ ಹೋಗ್ತಾರೇ ಕ್ಷೇತ್ರದಲ್ಲಿ ಜನರ ಮನಸ್ಸು ಪರಿವರ್ತನೆಯಾಗಬೇಕು ಎಂದರು.
ಕೊರಟಗೆರೆ :-ದೇಶದಲ್ಲಿ ಅಚ್ಚೇ ದಿನ ಇದೆ ಆದರೆ ರಾಜ್ಯಕ್ಕೆ ಅಚ್ಚೇದಿನ ಬರಬೇಕಾದರೆ ಸಿದ್ದರಾಮಯ್ಯ ಮನೆಗೆ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ಹೇಳಿದರು.
ಪಟ್ಟಣ ದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪರಿರ್ತನಾ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ನೀನು ನಿಲ್ಲಿಸು ಸಿದ್ದರಾಮಯ್ಯ... ನಿನ್ನದೇನಿದ್ದರೂ ಇನ್ನು 4 ತಿಂಗಳು ಏನು ಬೇಕಾದರೂ ಮಾತನಾಡಿಕೋ ಆಮೇಲೆ ನೀನು ಸೇರಬೇಕಾದ ಜಾಗಕ್ಕೆ ಸೇರುತ್ತೀಯ ನಾನೇ ನಿನ್ನ ಮತ್ತು ನಿನ್ನ ಸಂಪುಟದ ಅಲವರನ್ನು ಜೈಲಿಗೆ ಕಳೂಹಿಸುತ್ತೇನೆ ನೀನು ಎಸಿಬಿ, ಇಒಡಿ ತನಿಖೆಗಳಲ್ಲಿ ಖುಲಾಸೆಯಾಗಿರುವ ಕೇಸ್ಗಳನ್ನು ಮರು ತನಿಖೆ ನಡೆಸು ನಿಮ್ಮ ಟೀಮನ್ನು ಸೇರಬೇಕಾದ ಜಾಗಕ್ಕೆ ಸೇರಿಸುತ್ತೇನೆ.
ಶಾಸಕ ಸುರೇಶ್ ಗೌಡ ಮಾತನಾಡಿ ಪರಂ ರನ್ನು ಸಿದ್ದರಾಮಯ್ಯ ಸೋಲಿಸಿದ್ರೆ.. ಅದೇ ರೀತಿ ಪಿ.ಆರ್ ಸುಧಾಕರ್ರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ ಸೋಲಿಸ್ತಾರೆ... ಇಬ್ಬರೂ ಸಹ ಈ ಬಾರಿ ಮನೆಗೆ ಹೋಗ್ತಾರೇ ಕ್ಷೇತ್ರದಲ್ಲಿ ಜನರ ಮನಸ್ಸು ಪರಿವರ್ತನೆಯಾಗಬೇಕು ಎಂದರು.
ಕ್ಷೇತ್ರದ ಮತದಾರರು ಪರಂಗೆ ಪ್ರಚಾರಕ್ಕೆ ಟಾಂಗ್ ನೀಡುತ್ತಿದ್ದು ನೀನು ಹೈಟೆಕ್ ಶಾಸಕನಾಗಿಯೂ ಬೇಡ... ಮುಖ್ಯಮಂತ್ರಿಯಾಗುವುದೂ ಬೇಡ ನಮ್ಮ ಕ್ಷೇತ್ರಕ್ಕೆ ಚುನಾವಣೆ ಸಂದರ್ಭದಲ್ಲಿ ಬರಬೇಡ ಎಂದು ಗ್ರಾಮಗಳ ಭೇಟಿಯಲ್ಲಿ ಹರಿಹಾಯ್ದದ್ದಾರೆ ಪರಂ ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಬಿಜೆಪಿ ವೈ.ಹೆಚ್ ಹುಚ್ಚಯ್ಯ ಮಾತನಾಡಿ ಪರಮೇಶ್ವರ್ ಕ್ಷೇತ್ರಕ್ಕೆ ಗ್ರಹಣವಾಗಿದ್ದಾರೆ ಅದೇ ರೀತಿ ತೊಂದರೆ ನೀಡುವ ಶನಿಗ್ರಹವಾಗಿ ಕಾಲಿಟ್ಟಿದ್ದಾರೆ ಇದನ್ನು ಎಲ್ಲರೂ ಅರಿಯಬೇಕು ಇಲ್ಲವಾದರೆ ಈ ಗ್ರಹ ವಕ್ಕರಿಸಿ ಸರ್ವನಾಶ ಮಾಡಿಬಿಡುತ್ತದೆ ಎಂದು ಪರಂಮೇಶ್ವರ್ ಕ್ಷೇತ್ರ ಪ್ರವಾಸದ ವಿರುದ್ದ ಹರಿಹಾಯ್ದರು.
ಪರಮೇಶ್ವರ್ ಬಗ್ಗೆ ಏನೂ ಮಾತನಾಡದ ಯಡ್ಯೂರಪ್ಪ:- ಕೆಪಿಸಿಸಿ ಅಧ್ಯಕ್ಷ ಪರಂ ಬಗ್ಗೆ ಒಂದೂ ಮಾತನ್ನೂ ಯಡ್ಯೂರಪ್ಪ ಆಡಳಿಲ್ಲ ಒಂದು ಟೀಕೆಯನ್ನು ಮಾಡದಿರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ
ಕರ್ನಾಟಕ ಸಂಪದ್ಬರಿತ ರಾಜ್ಯ:- ರಾಜ್ಯದಲ್ಲಿ ಯಾವುದಕ್ಕೂ ಕೊರತೆಯಿಲ್ಲ ಇಡೀ ದೇಶದಲ್ಲಿಯೇ ಅತೀ ಹೆಚ್ಚಿನ ಖನಿಜ, ಶ್ರೀಗಂಧ, ರೇಷ್ಮೆ, ಹೊಂದಿದೆ ಎಲ್ಲವನ್ನೂ ಸಮರ್ಪಕವಾಗಿ ಉಳಿಸಿ ಬೆಳೆಸಿದರೆ ದೇಶದ ನಂ.1 ರಾಜ್ಯ ಕರ್ನಾಟಕ ರಾಜ್ಯವಾಗಲಿದೆ.
ನನ್ನ ಆಸೆಯೇ ಬೇರೆ:- ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೇನೆ... ಮುಖ್ಯಮಂತ್ರಿಯಾಗಿದ್ದೇನೆ... ಮತ್ತೆ ನಾನು ಅಧಿಕಾರದ ಆಸೆಗಾಗಿ ಬಂದಿಲ್ಲ ರಾಜ್ಯದ ಹಿತವನ್ನು ಕಾಯುವ ಸಲುವಾಗಿ ರೈತರ, ದೀತ, ದಲಿತ, ಸಹಾಯಕ್ಕಾಗಿ ನಿಮ್ಮೆದುರು ಬಂದಿದ್ದೇನೆ ಅಧಿಕಾರ ಅನುಭವಿಸುವ ಇರಾದೆಯಿಲ್ಲ
ಯಡ್ಯೂರಪ್ಪ ಎಂದು ಕರೆಯಬೇಡಿ:- ಜಿಲ್ಲೆಗೆ ನೀರಾವರಿ ಯೋಜನೆ ತರುಲು ನಾನು ಶತಸಿದ್ದ ಕುಡಿಯುವ ನೀರನ್ನು ಪೂರೈಸಲು ನಾನು ಪ್ರಧಾನ ಮಂತ್ರಿಗಳ ಕಾಲನ್ನು ಹಿಡಿದು ಕುಡಿಯುವ ನೀರನ್ನು ತುಮಕೂರು ಜಿಲ್ಲೆಗೆ ತರುತ್ತೇನೆ ತಪಿದರೆ ನನ್ನನ್ನು ಯಡ್ಯೂರಪ್ಪ ಎಂದು ಕರೆಬೇಡಿ ಎಂದರು.
ವೈ.ಹೆಚ್ ಹುಚ್ಚಯ್ಯ ಅಧಿಕೃತ ಅಭ್ಯರ್ಥಿ !??:- ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಯಾವ ಕ್ಷೇತ್ರದಲ್ಲೂ ಪಕ್ಷದ ಅಧಿಕೃತ ಅಭ್ಯಥರ್ಿಯನ್ನು ಘೋಷಣೆ ಮಾಡುವಂತಿಲ್ಲ ಎಂದಿದ್ದರೂ ಸಹ ಯಡ್ಯೂರಪ್ಪ ವೈ.ಹೆಚ್ ಹುಚ್ಚಯರನ್ನು ಬಡವ... ಹಣವಿಲ್ಲದವಾ... ಪ್ರಾಮಾಣಿಕ... ಪ್ರತಿಯೊಬ್ಬರೂ 200 ರೂ ಹಾಕಿಕೊಂಡು ಗೆಲ್ಲಿಸಿ ಎಂದು ಹೇಳುವ ಮೂಲಕ ಅಧಿಕೃತ ಅಭ್ಯಥರ್ಿ ಎಂದು ಘೋಷಣೆ ಮಾಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.
ಹೆಸರು ಹೇಳದ ಮುಖಂಡರೊಬ್ಬರು ಮಾತನಾಡಿ ಜಿಲ್ಲಾಧ್ಯಕ್ಷ ಸುರೇಶ್ ಗೌಡರು ಯಡ್ಯೂರಪ್ಪರನ್ನು ಒತ್ತಾಯಿಸಿ ಹುಚ್ಚರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಇಲ್ಲವಾದಲ್ಲಿ ನಾನು ಚುನಾವಣೆ ಸ್ಪರ್ಥಿಸುವುದಿಲ್ಲ ... ಹುಚ್ಚಯ್ಯ ಒಂದು ಪ್ರಭಲ ಸಮುದಾಯದ ನಾಯಕ ಎಂದು ತಿಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ ವೇಧಿಕೆಯಲ್ಲಿ ನಾನೂ ಅಭ್ಯರ್ಥಿ ಎಂದು ಯಡ್ಯೂರಪ್ಪನವರ ಬಾಷಣದ ಸಂದರ್ಭದಲ್ಲಿ ಪಕ್ಕದಲ್ಲೇ ನಿಂತಿದ್ದ ಡಾ. ಲಕ್ಷ್ಮೀಕಾಂತ್ ಮತ್ತು ವೇಧಿಯಲ್ಲಿದ್ದ ಆರತಿ ಯಡ್ಯೂರಪ್ಪನರ ಪರೋಕ್ಷ ಘೋಷಣೆಗೆ ತಬ್ಬಿಬ್ಬಾದರು.
ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ನಾರಾಯಣಸ್ವಾಮಿ, ಜನಾರ್ಧನಸ್ವಾಮಿ, ಮಾಜಿ ಸಂಸದ ಜಿ.ಎಸ್ ಬಸವರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಜಿಲ್ಲಾಧ್ಯಕ್ಷ ಜ್ಯೋಟಿ ಗಣೇಶ್, ಎಸ್ಸಿ ಮೋಚರ್ಾ ಜಿಲ್ಲಾಧ್ಯಕ್ಷ ರಾಮಾಂಜನಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್. ಪವನ್ ಕುಮಾರ್,ಮುಖಂಡರಾದ ತಿಮ್ಮಜ್ಜ, ಹಾಲೂರು ಲೇಪಾಕ್ಷಿ, ಮರಿಸ್ವಾಮಿ, ಮನುಶ್ರೀ, ಡಾ. ಲಕ್ಷ್ಮಿಕಾಂತ, ಆರತಿ ಸೇರಿದಂತೆ ಇತರೆ ಪಕ್ಷದ ಮುಖಂಡರು ಇದ್ದರು.
Comments