ಲೋಕ ಕಲ್ಯಾಣಾರ್ಥವಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ದಿ.೯ ಜನವರಿ ೨೦೧೮ ಮಂಗಳವಾರದಂದು ನೆರವೇರಿದ ಚಂಡೀ ಹೋಮ

09 Jan 2018 5:13 PM |
420 Report

ನಗರದ ಡಿ.ಕ್ರಾಸ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಅಯ್ಯಪ್ಪಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್, ಅನ್ನದಾನ ಸಮಿತಿ ಹಾಗೂ ಸಮಸ್ತ ಭಕ್ತಾದಿಗಳಿಂದ ದಿ. ೮-೧-೨೦೧೮ ಸೋಮವಾರ, ೯-೧-೨೦೧೮ ಮಂಗಳವಾರದಂದು ಶ್ರೀ ಮಂಜುನಾಥ ಭಟ್ಟ ವಿನಾಯಕ, ಶ್ರೀ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲ ಪ್ರಾಧ್ಯಾಪಕರು, ಅದ್ವೈತ ವೇದಾಂತ ವಿಭಾಗ, ಬೆಂ. ಇವರಿಂದ ಶ್ರೀ ಚಂಡಿ ಹೋಮ ನೆರವೇರಿಸಿದರು.

ದಿ. ೮-೧-೨೦೧೮ ಸೋಮವಾರ ಸಂಜೆ ೫ ರಿಂದ ವೇದಘೋಷ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹವಾಚನ, ಋತಿಗ್ವರಣ, ಕಳಶಸ್ಥಾಪನೆ, ಶ್ರೀ ರುದ್ರಪಠಣ, ಚಂಡಿಕಾ ಪೂಜಾ, ಸಪ್ತಶತೀ ಪಾರಾಯಣದಿಂದ ಕಾರ್ಯಕ್ರಮ ಪ್ರಾರಂಭವಾಯಿತು.

ದಿ. ೯-೧-೨೦೧೮ ಮಂಗಳವಾರ ಬೆಳಗಿನ ಜಾವ ೪-೪೫ ರಿಂದ ಶ್ರೀ ಗಣಪತಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಮಣ್ಯ ಸ್ವಾಮಿಗಳ ಆರಾಧನೆ ನಂತರ ಸ್ಥಾಪಿತ ಕಳಶಾರಾಧನೆ, ಸಗ್ರಹಕಪೂರ್ವಕ ಶ್ರೀ ಚಂಡೀ ಹೋಮ, ಪೂರ್ಣಾಹಿತಿ, ಕುಮಾರಿ ಪೂಜೆ, ಸುಮಂಗಲಿ ಪೂಜೆಯ ನಂತರ ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂರ್ಣವಾಯಿತು.

Edited By

Ramesh

Reported By

Ramesh

Comments