ಎಸ್.ಎಸ್.ಎಲ್.ಸಿ/ಪಿಯೂ.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ Rank ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ






ಕರ್ನಾಟಕ ರಾಜ್ಯ ದೇವಾಂಗ ಸಂಘ [ರಿ.] ಬೆಂಗಳೂರು ಇವರು ಇಂದು ಸಂಜೆ ೫-೩೦ಕ್ಕೆ ದೊಡ್ಡಬಳ್ಳಾಪುರ ನಗರದ ಮಾಪಲ್ ಬೇರ್ ಶಾಲೆಯ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ Rank ಮತ್ತು ಚಿನ್ನದ ಪದಕ ಪಡೆದ ಕು. ವಿ. ಪಾರ್ವತಿ, ಕು. ಎಸ್. ರಜನಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ೨ನೇ Rank ಪಡೆದ ಬಿ.ಎಸ್.ಶೀಲಾರಾಣಿ ಇವರಿಗೆ ಅಭಿನಂದನೆ ಹಾಗೂ ಎಸ್.ಎಸ್.ಎಲ್.ಸಿ/ಪಿಯೂ.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ರಮೇಶ್, ಖಜಾಂಚಿ. ಶ್ರೀ ಕೆ. ನಾರಾಯಣ್, ಸಂಘಟನಾ ಕಾರ್ಯದರ್ಶಿಗಳಾದ ರಾಜಣ್ಣ, ಕುದೂರು ರಾಜಶೇಖರ್, ದೇವಾಂಗ ಮಂಡಲಿ ಅಧ್ಯಕ್ಷರಾದ ವಿ.ತಿಮ್ಮಶೆಟ್ಟಪ್ಪ, ನಗರಸಭಾ ಸದಸ್ಯರಾದ ಪಿ.ಸಿ.ಲಕ್ಷ್ಮಿನಾರಾಯಣ್, ಶಿವಶಂಕರ್, ಮಹಿಳಾ ಸಮಾಜ ಅಧ್ಯಕ್ಷೆ ಪ್ರಭಾ, ಕಾರ್ಯದರ್ಶಿ ದೇವಕಿ, ಶ್ರೀಮತಿ. ಗಿರಿಜ, ಟಿ.ಎಂ.ಸಿ. ಬ್ಯಾಂಕ್ ನಿರ್ದೇಶಕಿ ಎ.ಆರ್.ಗಿರಿಜ, ಶ್ರೀ ದಾಸಿಮಯ್ಯ ಮಿತ್ರ ಮಂಡಲಿ ಸದಸ್ಯರು, ಸಂಕಣ್ಣನವರ ಕುಟುಂಬ ವರ್ಗ ಹಾಗೂ ಶ್ರೀ ಗಾಯತ್ರಿಪೀಠ ಮಿತ್ರ ಬಳಗದ ಪದಾಧಿಕಾರಿಗಳು, ದೇವಾಂಗ ಸಮಾಜದ ಎಲ್ಲ ಬಾಂದವರು ಹಾಜರಿದ್ದರು.
Comments