ಸರ್ಕಾರದ ವೈಫಲ್ಯದಿಂದ ರಾಜ್ಯದಲ್ಲಿ ಕೊಲೆಗಳು ಹೆಚ್ಚುತ್ತಿವೆ : ಸಿಎಂ ವಿರುದ್ಧ ಎಚ್ ಡಿಡಿ ಕಿಡಿ

ರಾಜ್ಯದಲ್ಲಿ ತುಂಡು ತುಂಡಾಗಿ ಕೊಲೆಗಳು ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಇಂತಹ ಹೀನ ಕೃತ್ಯ ಹೆಚ್ಚಾಗುತ್ತಿದ್ರು ಕೊಲೆಗಾರರನ್ನ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಇದರಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸರ್ಕಾರದ ವಿರುದ್ಧ ಕಿಡಿಕಾರಿದರು.
ಚಿಕ್ಕಮಗಳೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಬಳಿಕ ಮಾತಾನಾಡಿದ ಅವರು, ಸಿಎಂ ನಡೆಸುತ್ತಿರೋ ಸಾಧನಾ ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಸಮಾವೇಶ ಮಾಡುತ್ತಿದ್ದಾರೆ. ನೀವು ನಮ್ಮ ಪಕ್ಷಕ್ಕೆ ವೋಟ್ ಕೊಡಲೇಬೇಕು ಎಂದು ಅಧಿಕಾರಿಗಳಿಗೆ ಕೇಳಿಕೊಳ್ಳುತ್ತಿದ್ದಾರೆ. ಇದುವರೆಗೂ ಯಾವ ಮುಖ್ಯಮಂತ್ರಿಗಳು ಈ ರೀತಿ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಾವಿರಾರು ಕೋಟಿ ವೆಚ್ಚದ ಶಿಲಾನ್ಯಾಸವನ್ನು ಸಿಎಂ ಮಾಡುತ್ತಿದ್ದಾರೆ. ಈ ರೀತಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತಿರೋ ಸಿಎಂ ಹಿಂದೆಯೂ ಇರಲಿಲ್ಲ, ಮುಂದೇಯೂ ಇರೋದಿಲ್ಲ ಎಂದು ಮಾರ್ಮಿಕವಾಗಿ ಟೀಕೆ ಮಾಡಿದರು.
Comments