ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬಮೂಲ್ ಕಲ್ಯಾಣ ಟ್ರಸ್ಟ್, ಬೆಂ. ಮತ್ತು ಸಪ್ತಗಿರಿ ಆಸ್ಪತ್ರೆ ಬೆಂ. ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ.೯-೧-೨೦೧೮ನೇ ಮಂಗಳವಾರ ಬೆಳಿಗ್ಗೆ ೯ರಿಂದ ಮಧ್ಯಾನ್ಹ ೨ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ನುರಿತ ತಜ್ಞರಿಂದ ಬಮೂಲ್ ಕಲ್ಯಾಣ ಟ್ರಸ್ಟ್ ಮುಖಾಂತರ ಶ್ರೀ ಅಪ್ಪಯ್ಯಣ್ಣ, ಅಧ್ಯಕ್ಷರು, ಬಮೂಲ್ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಡಾ.ಟಿ. ಆಂಜಿನಪ್ಪ [ಶಸ್ತ್ರ ಚಿಕಿತ್ಸಾ ತಜ್ಞರು] ಇವರ ತಂಡದ ನುರಿತ ವೈದ್ಯರುಗಳಿಂದ ಶಿಬಿರದಲ್ಲಿ, ಸಾಮಾನ್ಯ ರೋಗ ಚಿಕಿತ್ಸೆ, ಮೂಳೆ ಮತ್ತು ಕೀಲುರೋಗ, ಕಿವಿ ಮೂಗು ಮತ್ತು ಗಂಟಲು, ಕಣ್ಣಿನ ತಪಾಸಣೆ, ಮಕ್ಕಳ ರೋಗ, ಚರ್ಮ ರೋಗ, ಸ್ತ್ರೀ ರೋಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸಕ್ಕರೆ ರೋಗ, ಹೃದ್ರೋಗ ಚಿಕಿತ್ಸೆ ಸೌಲಭ್ಯಗಳು ದೊರೆಯುತ್ತದೆ. ಬಿ.ಪಿ. ರಕ್ತ ಪರೀಕ್ಷೆ ಮತ್ತು ಇ.ಸಿ.ಜಿ. ಎಕೋ ಸ್ಕ್ಯಾನಿಂಗ್ ಮಾಡಲಾಗುವುದು.
ಮಾಹಿತಿಗೆ: ಡಾ. ಎಂ.ಶ್ರೀನಿವಾಸ್, ೭೭೬೦೯೬೬೮೫೬
ಡಾ. ಎಲ್.ಬಿ.ನಾಗರಾಜು, ೭೭೬೦೯೬೬೮೫೯
ಪಿ. ನಾರಾಯಣಸ್ವಾಮಿ, ೭೭೬೦೯೬೫೬೧೦
ಫಣೀಂದ್ರ, ೮೮೮೪೪೩೯೨೧೪
Comments