ಶ್ರೀ ದೇವರಾಜ ಅರಸು ಮಹಾವಿದ್ಯಾಲಯಕ್ಕೆ ರ್ಯಾಂಕ್, ಸಾಧನೆ ತೋರಿದ ಎಂ. ಪಾರ್ವತಿ, ಎಸ್. ರಜನಿ

05 Jan 2018 1:59 PM |
625 Report

ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿ ರ್ಯಾಂಕ್ ಮತ್ತು ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯಕ್ಕೆ ರ್ಯಾಂ ಕ್ ಮತ್ತು ಎರಡು ಚಿನ್ನದ ಪದಕಗಳು ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ಆರ್. ರವಿಕಿರಣ್ ತಿಳಿಸಿದರು. ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಎಂ.ಪಾರ್ವತಿ ನಾಲ್ಕನೇ ರ್ಯಾಂ ಕ್ ಗಳಿಸಿದ್ದಾರೆ, ಲೆಕ್ಕಶಾಸ್ತ್ರ ವಿಭಾಗದಲ್ಲಿ ಶೇಕಡ ೧೦೦ ಸಾಧನೆಯೊಂದಿಗೆ ಇನ್ ಸ್ಟಿಟ್ಯೂಟ್ ಆಫ್ ಅಕೌಂಟಿಂಗ್ ಆಫ್ ಇಂಡಿಯಾ, ಬೆಂ. ಅಧ್ಯಾಯ ರಜತೊತ್ಸವ ಸ್ಮಾರಕ ಪದಕವನ್ನು ಪಡೆದಿದ್ದಾರೆ. ನಗರದ ಕಲಾಸಿಪಾಳ್ಯ ನಿವಾಸಿ ಸಿ. ವಾಸುದೇವ್ ಮತ್ತು ಡಿ.ಎ. ವಸಂತಲಕ್ಷ್ಮಿ ಅವರ ಪುತ್ರಿಯಾದ ಪಾರ್ವತಿ ೬ ಸೆಮಿಸ್ಟರ್ ಗಳಲ್ಲಿ ಒಟ್ಟು ೧೦ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ೪೬೦೦ ಅಂಕಗಳಿಗೆ ೪೨೨೮ ಅಂಕಗಳನ್ನು ಪಡೆದು ಶೇ. ೯೧.೯೧ ಪಡೆದಿದ್ದಾರೆ.

ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ ಶ್ರೀನಿವಾಸ ಮತ್ತು ಗೌರಮ್ಮ ಅವರ ಪುತ್ರಿಯಾದ ಎಸ್. ರಜನಿ ಲೆಕ್ಕಶಾಸ್ತ್ರ ವಿಭಾಗದ ಪತ್ರಿಕೆಗಳಲ್ಲಿ ಶೇ.೧೦೦ ಸಾಧನೆಯೊಂದಿಗೆ ಇನ್ ಸ್ಟಿಟ್ಯೂಟ್ ಆಫ್ ಅಕೌಂಟಿಂಗ್ ಆಫ್ ಇಂಡಿಯಾ, ಬೆಂ. ಅಧ್ಯಾಯ ರಜತೊತ್ಸವ ಸ್ಮಾರಕ ಪದಕವನ್ನು ಪಡೆದಿದ್ದಾರೆ. ೬ ಸೆಮಿಸ್ಟರ್ ಗಳಲ್ಲಿ ೫ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದು ಒಟ್ಟು ೪೦೨೧ ಅಂಕಗಳನ್ನು ಪಡೆದಿದ್ದಾರೆ.

ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಲ್. ಜಾಲಪ್ಪ, ಕಾರ್ಯದರ್ಶಿ ಜಿ.ಎಚ್. ನಾಗರಾಜ್, ನಿರ್ದೇಶಕ ಜೆ. ರಾಜೇಂದ್ರ,ಸಿ.ಇ.ಒ. ಜೆ ನಾಗೇಂದ್ರಸ್ವಾಮಿ, ಪ್ರಾಂಶುಪಾಲ ಕೆ.ಆರ್. ರವಿಕಿರಣ್, ಭೋದಕ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Edited By

Ramesh

Reported By

Ramesh

Comments