ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕ: ರಾಮಾನುಜಮ್
ಕೊರಟಗೆರೆ ಜ.:- ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಮ್ಮ ದೇಶದ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಎಂದು ಎಂಪ್ರೆಸ್ಸ್ ಕಾಲೇಜಿನ ಉಪನ್ಯಾಕ ಕೆ.ಎಸ್ ಈರಣ್ಣ ತಿಳಿಸಿದರು. ಪಟ್ಟಣದ ರವೀಂದ್ರ ಭಾರತಿ ವಿಧ್ಯಾಸಂಸ್ಥೆ ವತಿಯಿಂದ ಬುಧವಾರ ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದಲ್ಲಿ ಶ್ರೀನಿವಾಸ ರಾಮಾನುಜರ ಜೀವನ ಗಣಿತ ಕ್ಷೇತ್ರದಲ್ಲಿ ಒಂದು ಹೊಸ ಯುಗಾರಂಭವನ್ನು ಪ್ರಾರಂಭ ಮಾಡಿದೆ, ಜವಾಹರ್ಲಾಲ್ ನೆಹರು ತಮ್ಮ ಡಿಸ್ಕವರಿ ಆಪ್ ಇಂಡಿಯಾದಲ್ಲಿ ಭಾರತ ದೇಶ ಗಣಿತದ ವಿಚಾರದಲ್ಲಿ ಇತ್ತೀಚಿಗಿನ ಒಬ್ಬ ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ ಎಂದು ರಾಮಾನುಜರ ಬಗ್ಗೆ ವಿಶ್ಲೇಷಣೆ ಮಾಡಿ ಬರೆದಿರುವುದು ವಿಶೇಷವಾಗಿದೆ ಎಂದರು.
ಶೈಕ್ಷಣಿಕ ಜಿಲ್ಲಾ ಮಟ್ಟದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ
ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕ: ರಾಮಾನುಜಮ್
ಕೊರಟಗೆರೆ ಜ.:- ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಮ್ಮ ದೇಶದ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಎಂದು ಎಂಪ್ರೆಸ್ಸ್ ಕಾಲೇಜಿನ ಉಪನ್ಯಾಕ ಕೆ.ಎಸ್ ಈರಣ್ಣ ತಿಳಿಸಿದರು.
ಪಟ್ಟಣದ ರವೀಂದ್ರ ಭಾರತಿ ವಿಧ್ಯಾಸಂಸ್ಥೆ ವತಿಯಿಂದ ಬುಧವಾರ ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಶ್ರೀನಿವಾಸ ರಾಮಾನುಜರ ಜೀವನ ಗಣಿತ ಕ್ಷೇತ್ರದಲ್ಲಿ ಒಂದು ಹೊಸ ಯುಗಾರಂಭವನ್ನು ಪ್ರಾರಂಭ ಮಾಡಿದೆ, ಜವಾಹರ್ಲಾಲ್ ನೆಹರು ತಮ್ಮ ಡಿಸ್ಕವರಿ ಆಪ್ ಇಂಡಿಯಾದಲ್ಲಿ ಭಾರತ ದೇಶ ಗಣಿತದ ವಿಚಾರದಲ್ಲಿ ಇತ್ತೀಚಿಗಿನ ಒಬ್ಬ ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ ಎಂದು ರಾಮಾನುಜರ ಬಗ್ಗೆ ವಿಶ್ಲೇಷಣೆ ಮಾಡಿ ಬರೆದಿರುವುದು ವಿಶೇಷವಾಗಿದೆ ಎಂದರು.
ರವೀಂದ್ರ ಭಾರತಿ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಡಾ.ಶೋಭಾಕೃಷ್ಣಮೂತರ್ಿ ಮಾತನಾಡಿ ಪ್ರತಿ ಧನಪೂಣರ್ಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು ಎಂಬುದು ಲೋಕದಲ್ಲಿ ವಿಶ್ವವಿಖ್ಯಾತ ನುಡಿಯಾಗಿದೆ, ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲು ಅಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮಾಥ್ರ್ಯ ಅವರಲ್ಲಿತ್ತು, ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಿದ ಸಮಗ್ರ ನಾಯಕ ನಮ್ಮ ರಾಮಾನುಜನ್ ಎಂದು ಹೇಳಿದರು.
ಪಟ್ಟಣದ ರವೀಂದ್ರಭಾರತಿ ವಿದ್ಯಾಸಂಸ್ಥೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮಟ್ಟದ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಜನ್ಮದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಗಣಿತಶಾಸ್ತ್ರದ ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ 18 ಪ್ರೌಢಶಾಲೆಯ 60 ಜನ ವಿದ್ಯಾಥರ್ಿಗಳಿಗೆ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪ್ರಧಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಗಣಿತ ನಗೆಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರವೀಂದ್ರಭಾರತಿ ವಿದ್ಯಾಸಂಸ್ಥೆಯ ಸಹಕಾರ್ಯದಶರ್ಿ ಕೆ.ಜಿ.ನವೀನಕುಮಾರ್, ಖಜಾಂಚಿ ಆದಿರಮೇಶ್, ಸಲಹೆಗಾರರಾದ ಸುಧಾಮಣಿ, ಪ್ರಾಂಶುಪಾಲ ಜಿ.ಲೋಕೇಶ್, ಮುಖ್ಯೋಪಾಧ್ಯಾಯ ಲಕ್ಷ್ಮೀನರಸಿಂಹಮೂತರ್ಿ, ಪ್ರಾಥಮಿಕ ಶಾಲೆಯ ಅಮೀನಭೀ, ಕೆ.ಜಿ.ನಾಗರಾಜು, ಕಾಲೇಜು ಮತ್ತು ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಉಪನ್ಯಾಸಕರು, ಆಡಳಿತ ಮಂಡಳಿ, ಸಿಬ್ಬಂಧಿ ವರ್ಗ ಸೇರಿದಂತೆ ವಿದ್ಯಾಥರ್ಿಗಳು ಇದ್ದರು.
Comments