ನಾನು ಸಿದ್ದರಾಮಯ್ಯ ಇಬ್ಬರೂ ಒಳ್ಳೇ ಸ್ನೇಹಿತರು: ಡಾ. ಜಿ ಪರಮೇಶ್ವರ್
ಕೊರಟಗೆರೆ ಜ:- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೆ ನಮ್ಮ ಗುರಿ ಎಂದು ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಕುರುಬ ಸಮಾಜದ ಸಭೆಯಲ್ಲಿ ಸ್ಪಷ್ಠಪಡಿಸಿದರು. ತಾಲೂಕಿನ ಕೆರೆಯಾಗಲಹಳ್ಳಿ ಗ್ರಾಮದಲ್ಲಿ ತಾಲೂಕು ಕುರುಬ ಸಂಘ ಏರ್ಪಡಿಸಿದ್ದ ಕುರುಬ ಸಮಾಜದ ಮುಖಂಡರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ನಾನು ಸಿದ್ದರಾಮಯ್ಯ ಇಬ್ಬರೂ ಒಳ್ಳೇ ಸ್ನೇಹಿತರು: ಡಾ. ಜಿ ಪರಮೇಶ್ವರ್
ಕೊರಟಗೆರೆ ಜ:- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೆ ನಮ್ಮ ಗುರಿ ಎಂದು ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಕುರುಬ ಸಮಾಜದ ಸಭೆಯಲ್ಲಿ ಸ್ಪಷ್ಠಪಡಿಸಿದರು.
ತಾಲೂಕಿನ ಕೆರೆಯಾಗಲಹಳ್ಳಿ ಗ್ರಾಮದಲ್ಲಿ ತಾಲೂಕು ಕುರುಬ ಸಂಘ ಏರ್ಪಡಿಸಿದ್ದ ಕುರುಬ ಸಮಾಜದ ಮುಖಂಡರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪರಿಶಿಷ್ಠಿ ಜಾತಿ ಮತ್ತು ಪಂಗಡ ಶೇ.24.1 ರಷ್ಟು ಮತ್ತು ಶೇ. 7 ರಿಂದ 8 ರಷ್ಟು ಕುರುಬ ಸಮಾಜ ಸೇರಿದಂತೆ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಜನಾಂಗವು ಒಟ್ಟುಗೊಡಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಿದೆ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಪಕ್ಷವು ಜಯಬೇರಿ ಬಾರಿಸ ಬೇಕಿದೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮ ಯ್ಯ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವಿರೋಧ ಪಕ್ಷದವರು ಹೇಳಿಕೊಂಡು ತಿರುಗುತ್ತಿದ್ದಾರೆಯೇ ಹೊರತು ನಾವಿಬ್ಬರೂ ಎಲ್ಲಿಯೂ ಈ ವಿಷಯವನ್ನು ಪ್ರಸ್ಥಾಪ ಮಾಡಿಲ್ಲ ಆ ರೀತಿ ನಡೆದುಕೊಂಡಿಲ್ಲ ಪಕ್ಷಗಳಲ್ಲಿ ಸಣ್ಣ ಪುಟ್ಟ ವಿದ್ಯಾಮಾನಗಳು ಬರುತ್ತಿರುತ್ತವೆ ಈ ಬೆಳವಣಿಗೆ ಎಲ್ಲಾ ಪಕ್ಷಗಳಲ್ಲೂ ಇದೆ, ಅದರೆ ನನ್ನ ಅವರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಠಿಸಿ ಲಾಭಗಳಿಸುವುದೇ ವಿರೋಧ ಪಕ್ಷದವರ ರಾಜಕೀಯ ತಂತ್ರವಾಗಿದ್ದು ಯಾರು ಇದಕ್ಕೆ ಕಿವಿಕೊಡಬಾರದು ಎಂದರು.
ಭಕ್ತ ಕನಕದಾಸರು ಹಲವು ವರ್ಷಗಳ ಹಿಂದೆಯೇ ಸಮಾನತೆಯನ್ನು ದಾರ್ಶನಿಕವನ್ನು ಮನುಜಕುಲವು ಒಂದೇ ಎಂಬುವ ತತ್ವವನ್ನು ಪ್ರಚಾರ ಮಾಡಿದ ಮಹಾನ್ ವ್ಯಕ್ತಿಯಾಗಿ ದ್ದಾರೆ, ಹಿಂದೆ ತುಳಿತಕ್ಕೆ ಒಳಗಾಗಿರುವ ಸಮಾಜದ ಎಲ್ಲರೂ ಇಂದು ಮುಖ್ಯವಾಹಿನಿಗೆ ಬರುತ್ತಿದ್ದು ಕಾಂಗ್ರೆಸ್ ಪಕ್ಷವು ಹಿಂದುಳಿದ ಕುರುಬ ಸಮಜದ ಸಿದ್ದರಾಮಯ್ಯನವರಂತಹ ದಕ್ಷ ಆಡಳಿತಗಾರರನ್ನು ನೀಡಿದ್ದು ದಲಿತ ವರ್ಗದ ಪ್ರಮಾಣಿಕತೆಯ ನನ್ನನ್ನು ಅದ್ಯಕ್ಷರನ್ನಾಗಿ ನೇಮಸಿದೆ ಅದೇ ರೀತಿಯಾಗಿ ವಿವಿದ ಜನಾಂಗದ ನಾಯಕರುಗಳನ್ನು ಪಕ್ಷವು ಮಹತ್ತರ ಜವಾಬ್ದಾರಿ ನೀಡಿದೆ ಈ ಸಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು,
ಕಳೆದ ಚುನಾವಣೆಯಲ್ಲಿ ಹೊರಗಿನವರಿಂದ ವ್ಯತ್ಯಾಸವಾಗಿದ್ದು, ಕ್ಷೇತ್ರದ ಜನತೆ ನನನ್ನು ನಂಬಿದ್ದರು ಆದರೆ ಈ ಬಾರಿ ಆರೀತಿ ಆಗಲು ಬಿಡುವುದಿಲ್ಲ ಮುಂಬರುವ ದಿನಗಳಲ್ಲಿ ನಾನು ಮತ್ತು ಮುಖ್ಯಮಂತ್ರಿಗಳು ಒಟ್ಟಾಗಿ ದುಡಿದು ಪಕ್ಷವನ್ನು ಆಧಿಕಾರಕ್ಕೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಕೆಂಪರಾಜು, ತಾಲೂಕು ಅಧ್ಯಕ್ಷ ಮೈಲಾರಪ್ಪ, ಗೌರವಾದ್ಯಕ್ಷ ಮಲ್ಲಣ್ಣ, ಕನಕಯವಸೇನೆ ರಂಗಧಾಮಯ್ಯ, ಮುಖಂಡರಾದ ವೀರಣ್ಣ, ಕುರುಡಗಾನಹಳ್ಳಿ ರಂಗಣ್ಣ, ಚಿಕ್ಕಹನುಮಯ್ಯ, ಲಕ್ಷ್ಮಣ್, ರಂಗನಾಥ್, ಮೈಲಾರಯ್ಯ, ಉಮಾಶಂಕರ್, ನಂಜುಂಡಯ್ಯ , ಪಕ್ಷದ ವಕ್ತಾರ ಅನಿಲ್ಕುಮಾರ್ ಪಾಟೀಲ್, ಬಲಬೀರ್ ಸಿಂಗ್ ಸೇರಿದಂತೆ ಇತರರು ಇದ್ದರು.
Comments