ಚನ್ನಪಟ್ಟಣದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಅಬ್ಬರಿಸಿದ ಡಿಕೆಶಿ
ನಾವು ಸುಮ್ಮನೆ ಚನ್ನಪಟ್ಟಣಕ್ಕೆ ಬಂದಿಲ್ಲ. ಒಳ್ಳೆ ಗಳಿಗೆ, ಸಮಯ ಎಲ್ಲಾ ನೋಡಿಕೊಂಡು ಬಂದಿದ್ದೀವಿ. ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ದರೋಡೆ ಮಾಡಿದವರನ್ನ, ರೇಪ್ ಮಾಡಿದವರನ್ನ, ಕಳ್ಳತನ ಮಾಡಿದವರನ್ನ, ಸುಳ್ಳು ಹೇಳಿದವರನ್ನ ಯಾರನ್ನ ಬೇಕಾದರು ಕ್ಷಮಿಸು. ಆದ್ರೆ ಉಪಕಾರ ಪಡೆದು ದ್ರೋಹ ಮಾಡಿದವರನ್ನು ಮಾತ್ರ ಕ್ಷಮಿಸಬೇಡ ಅಂತ ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ರು. ಪಕ್ಷಕ್ಕೆ ದ್ರೋಹ ಮಾಡುವುದು ಅಂದರೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ರು.
ಹೈಕಮಾಂಡ್ ಹೇಳಿದವರು ಇಲ್ಲಿ ಅಭ್ಯರ್ಥಿ ಆಗ್ತಾರೆ. ಆದರೆ ಅಭ್ಯರ್ಥಿ ಇಲ್ಲಿ ನೆಪ ಮಾತ್ರ. ನಾನು ಹಾಗೂ ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ. 30 ವರ್ಷದಿಂದ ನನ್ನನ್ನು ನೋಡಿದಿರಾ ಅಂತ ಡಿಕೆಶಿ ಹೇಳಿದ್ರು.ಬುದ್ಧ, ಬಸವ ಉತ್ತಮ ಸಮಾಜ ಉದ್ಧಾರಕ್ಕಾಗಿ ಮನೆ ಬಿಟ್ಟ ಘಳಿಗೆ, ಗಾಂಧೀಜಿ ಕಾಂಗ್ರೆಸ್ ಗೆ ಬಂದ ಘಳಿಗೆ, ಅಂಬೇಡ್ಕರ ಸಂವಿಧಾನ ಬರೆದ ಘಳಿಗೆ, ಕೆಂಪೇಗೌಡ ಬೆಂಗಳೂರು ನಗರ ಕಟ್ಟಿದ ಘಳಿಗೆ, ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಹುದ್ದೆ ತ್ಯಜಿಸಿದ ಘಳಿಗೆ, ಹಾಗೆಯೇ ಚನ್ನಪಟ್ಟಣದಲ್ಲಿ ಬದಲಾವಣೆ ಘಳಿಗೆಯಲ್ಲಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹಾಡಿ ಹೊಗಳಿದ್ರು.ಸಿಎಂ ಸಿದ್ದರಾಮಯ್ಯ ಮಾತನಾಡಿ, ಚನ್ನಪಟ್ಟಣ ಕ್ಷೇತ್ರಾಭಿವೃದ್ಧಿಗೆ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ.
ಇಲ್ಲಿನ ಶಾಸಕರು ತಾವೇ ಅಭಿವೃದ್ಧಿ ಮಾಡಿರುವರೆಂದು ಹೇಳ್ಕೊಳ್ತಿದ್ದಾರೆ. ನಮ್ಮ ಸರ್ಕಾರ ಹಣ ಕೊಡ್ಲಿಲ್ಲ ಅಂದ್ರೆ ಅಭಿವೃದ್ಧಿ ಮಾಡ್ತಿದ್ರಾ ಅವರು? ಇವತ್ತಿನ ಕಾರ್ಯಕ್ರಮಕ್ಕೆ ಇಲ್ಲಿನ ಶಾಸಕರನ್ನೂ ಕರೆದಿದ್ದೆವು. ಆದರೆ ಅವರು ಬರಲಿಲ್ಲ. ಜನರಿಗೆ ಸುಳ್ಳು ಹೇಳಿದ್ದಾರೆ ಇಲ್ಲಿನ ಶಾಸಕರು. ತಮ್ಮ ಸುಳ್ಳು ಬಯಲಾಗಿಬಿಡುತ್ತೆ ಅನ್ನೋ ಕಾರಣಕ್ಕೆ ಇಲ್ಲಿನ ಶಾಸಕರು ಕಾರ್ಯಕ್ರಮಕ್ಕೆ ಬರಲಿಲ್ಲ ಅಂದ್ರು. ಇಲ್ಲಿನ ಶಾಸಕರು ಯಾವತ್ತಾದರೂ ಸದನಕ್ಕೆ ಬಂದಿದ್ದಾರಾ? ರಾಮನಗರ ಜಿಲ್ಲೆ, ಚನ್ನಪಟ್ಟಣಕ್ಕೆ ಸಂಬಂಧಿಸಿದ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಇಲ್ಲಿನ ಶಾಸಕರು. ಮತ್ತೆ ನೀವೆಲ್ಲ ಅವರಿಗೆ ಓಟು ಕೊಟ್ಟಿರೋದು ಎಲ್ಲೋ ತಿರುಗಾಡಿಕೊಂಡಿರಲಿ ಅಂತಾನಾ? ಮತ್ತೆ ಇವರೆಂಥ ಜನಪರ, ಅಭಿವೃದ್ಧಿ ಪರ ಶಾಸಕರಾಗಲು ಅರ್ಹರು? ಅಂತ ಪ್ರಶ್ನಿಸಿದ್ರು. ಮುಂದಿನ ಬಾರಿ ಮತ್ತೆ ಕಾಂಗ್ರೆಸ್ ಗೇ ಆಶೀರ್ವಾದ ಮಾಡಿ ಅಂತ ಹೇಳಿದ್ರು.
Comments