ಚುನಾವಣೆ ತಯಾರಿ ಕುರಿತು ಎಚ್ ಡಿಕೆ ಮುಧೋಳ ನಗರಕ್ಕೆ ಆಗಮಿಸಲಿದ್ದಾರೆ

02 Jan 2018 6:09 PM |
732 Report

ಜ.6 ರಂದು ಮುಧೋಳ ನಗರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಆಗಮಿಸಲಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಪಕ್ಷ ಸಂಘಟನೆಗಾಗಿ ಆಗಮಿಸುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಲು, ಚುನಾವಣೆ ತಯಾರಿಯ ಕುರಿತು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಆಗಮಿಸುತ್ತಿದ್ದು ತಾಲೂಕಿನ ಜನತೆ, ರೈತರು, ನೇಕಾರರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮುಧೋಳ ಮತಕ್ಷೇತ್ರದ ಜೆಡಿಎಸ್ ಮುಖಂಡರಾದ ಶಂಕರ ನಾಯಕ ಅವರು ಮನವಿ ಮಾಡಿದರು.

 

 

Edited By

Shruthi G

Reported By

hdk fans

Comments