ದೊಡ್ಡಬಳ್ಳಾಪುರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ "ನಮ್ಮ ಓಟ ನಮ್ಮೆಲ್ಲರ ವಿಕಸನಕ್ಕಾಗಿ" ಪುರುಷರ ವಿಭಾಗದಲ್ಲಿ ಕಿರಣ್ ಪ್ರಥಮ, ಮಹಿಳೆಯರ ವಿಭಾಗದಲ್ಲಿ ಚೈತ್ರ ಪ್ರಥಮ ಸ್ಥಾನ






ವ್ಯಕ್ತಿ ವಿಕಸನ [ರಿ.] ರವರಿಂದ ಆಯೋಜಿಸಲಾಗಿದ್ದ ೪ಕೆ ಓಟ ಇಂದು ಯಶಸ್ವಿಯಾಗಿ ನಡೆಯಿತು. ೫ ವರ್ಷದ ಪುಟಾಣಿಯಿಂದ ೫೦ ವರ್ಷದ ಹಿರಿಯರವರೆಗೆ ಸುಮಾರು ೫೦೦ ಮಂದಿ ಯಶಸ್ವಿಯಾಗಿ ಓಟವನ್ನು ಮುಗಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡುತ್ತಾ ಪ್ರಥಮವಾಗಿ ಮುಗಿಸಿದ ಮಕ್ಕಳು ಮಹಿಳೆ ಮತ್ತು ಯುವಕರಿಗೆ ತಲಾ ೫ ಸಾವಿರಿರೂ. ನಗದು ಬಹುಮಾನ ಘೋಷಿಸಿದರು. ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸುವ ಎಲ್ಲಾ ಓಟಗಾರರಿಗೆ ಮೆಡಲ್ ಮತ್ತು ಪ್ರಶಂಸನಾ ಪತ್ರವನ್ನು ಕೊಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ತ.ನ. ಪ್ರಭುದೇವ್ ಮುಖ್ಯ ಅತಿಥಿಗಾಳಾಗಿ ಭಾಗವಹಿಸಿದ್ದರು, ಇವರ ಜೊತೆಯಲ್ಲಿ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಕಾಂಗ್ರೆಸ್ ಮುಖಂಡರಾದ ರಂಗರಾಜು, ನಟರಾಜ್, ನಗರಸಭಾ ಸದಸ್ಯ ಶಿವಶಂಕರ್, ರುಮಾಲೆ ನಾಗರಾಜ್ ವ್ಯಕ್ತಿ ವಿಕಸನ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
Comments