ಉಪ್ಪಿನಿರ್ದೇಶನದಲ್ಲಿ ಡಾ. ವಿಷ್ಣವರ್ಧನ್ ನಟಿಸ ಬೇಕಿದ್ದ ಸಿನಿಮಾ ಯಾವುದು ಗೊತ್ತಾ ..!!
ಸಾಹಸಸಿಂಹ ವಿಷ್ಣವರ್ಧನ್ರವರಿಗೆ, ಟ್ರೆಂಡ್ ಸೆಟ್ಟರ್, ಸ್ಯಾಂಡಲ್ವುಡ್ ಬುದ್ದಿವಂತ, ಸ್ಕ್ರೀನ್ ಪ್ಲೇ ವಿಭಾಗದ ನಿಸ್ಸೀಮ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಒಂದು ಸಿನಿಮಾವನ್ನು ಡೈರೆಕ್ಟ್ ಮಾಡಬೇಕಿತ್ತು. ಆದರೆ ದುರಾದೃಷ್ಟ ಆ ಸಿನಿಮಾ ಸೆಟ್ ಏರಲೇ ಇಲ್ಲ.
ಕನ್ನಡ ಚಿತ್ರರಂಗ ಕಂಡ ಸಾಹಸಸಿಂಹ, ಅಭಿಮಾನಿಗಳ ಪಾಲಿನ ಮಾಣಿಕ್ಯ ಅಜಾತಶತ್ರು ಡಾ. ವಿಷ್ಣವರ್ಧನ್ ಇಂದಿಗೆ ಅವರು ನಮ್ಮನ್ನು ಅಗಲಿ 9ವರ್ಷ. ಒಂದರ್ಥದಲ್ಲಿ ಇವತ್ತು ಸ್ಯಾಂಡಲ್ವುಡ್ಗೆ ಕರಾಳ ದಿನವೆಂದೇ ಹೇಳಬೇಕು. ಆದರೆ ಅವರು ನಮ್ಮೊಂದಿಗೆ ಇಲ್ಲ ಎಂದು ಇಂದಿಗೂ ಕೂಡ ಹೇಳಲಾಗದು. ಅವರ ಅಭಿನಯದ ಚಿತ್ರಗಳ ಮುಖೇನ ಇಂದಿಗೂ ಕೂಡ ನಮ್ಮೊಂದಿಗೆ ಜೀವಂತಾವಾಗಿಯೇ ಇದ್ದಾರೆ. ಏಕೆಂದ್ರೆ ಡಾ. ವಿಷ್ಣು ಸಹಸ್ರ ಕುಲಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದು ಮರೆಯಾಗದ ಮುತ್ತಿನಹಾರ, ಹುತಾತ್ಮ ಕಲಾವಿಧ ಎಂದರೆ ತಪ್ಪಾಗುವುದಿಲ್ಲವೇನೋ .
ಆ ಸಿನಿಮಾ ಹೆಸರು ಏನಪ್ಪಾ ಅಂದ್ರೆ ಯುಘೇ ಯುಘೇ ಹೌದು ಎಲ್ಲಾ ಅಂದು ಕೊಂಡಂತೆ ಆಗಿದ್ರೆ ಬಾಹುಬಲಿ ಚಿತ್ರ ರಿಲಿಸ್ ಆಗುವ 10 ವರ್ಷಗಳಿಗೂ ಹಿಂದೆಯೇ ಬಾಹುಬಲಿ ಚಿತ್ರದಂತಹ ಸಿನಿಮಾವನ್ನು ಉಪ್ಪೇಂದ್ರ ಕನ್ನಡದಲ್ಲಿ ನಿರ್ದೇಶನ ಮಾಡಿದಂತಾಗುತ್ತಿತ್ತು. ಡಾ. ವಿಷ್ಣವರ್ಧನ್ ಉಪೇಂದ್ರ ನಿರ್ದೇಶನದಲ್ಲಿ ನಟಿಸ ಬೇಕಿತ್ತು. ರಾಕ್ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಸಿನಿಮಾ ಒಂದೊಮ್ಮೆ ಉಪ್ಪಿ ನಿರ್ದೇಶಿಸಿದ್ದರೇ, ಬಹುತೇಕ ಬಾಹುಬಲಿ ಚಿತ್ರಕ್ಕೆ ಈ ಚಿತ್ರ ಪ್ರೇರಣೆ ಎಂಬ ಮಾತುಗಳು ಕೇಳಿ ಬರುತ್ತಿತ್ತೇನೋ ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ ಈ ಚಿತ್ರ ಸೆಟ್ ಏರಲೇ ಇಲ್ಲ.
Comments