ದೊಡ್ಡಬಳ್ಳಾಪುರದ ಪುರಪಿತೃ ನಗರಸಭಾಧ್ಯಕ್ಷರಾದ ತ.ನ. ಪ್ರಭುದೇವ್ ರವರಿಗೆ ಒಂದು ಬಹಿರಂಗ ಪತ್ರ
ಮಾನ್ಯರೇ, ದೀರ್ಘಕಾಲದ ನಿಮ್ಮ ಹೋರಾಟದ (ಕನ್ನಡಪರ ಹಾಗು ಜನಪರ ) ಫಲವಾಗಿ ಇಂದು ನಗರಕ್ಕೆ ಅಧ್ಯಕ್ಷರಾಗಿದ್ದೀರಿ, ನಾವೆಲ್ಲಾ ಹೆಮ್ಮೆ ಪಡುವ ವಿಚಾರ ಕೂಡ, ಇನ್ನು ನಿಮ್ಮ ಕಾಲಘಟ್ಟದಲ್ಲಿ ನಾವೆಲ್ಲಾ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ,"ಕನ್ನಡದ ಹೆಮ್ಮೆಯ" ನಟ ಡಾ. ವಿಷ್ಣುವರ್ಧನ್ ಅವರ ಜ್ಞಾಪಕಾರ್ಥವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ಅಧಿಕೃತವಾಗಿ "ಪ್ರಮುಖ ರಸ್ತೆ" ಯೊಂದಕ್ಕೆ ಅವರ ಹೆಸರಿಡುವ ಕೆಲಸ ತಮ್ಮಿಂದಾಗಬಾರದೇಕೆ ?
ಸಾದ್ಯವಾದರೆ "ಪ್ರತಿಮೆ" ಸ್ಥಾಪನೆಯಾದರೆ ಕನ್ನಡಿಗರಾದ ನಮಗೆ ಹಾಲುಂಡಷ್ಟು ಸಂತೋಷವಾಗುತ್ತದೆ, ಮುಂದಿನ ಪೀಳಿಗೆ ಅವರನ್ನ ನೆನೆಯುವ ಜೊತೆ ನಿಮ್ಮನ್ನು ನೆನೆಯುತ್ತೆ, ದಯಮಾಡಿ ನೀವು ಈ ವಿಷಯದಲ್ಲಿ ಕಾಳಜಿ ವಹಿಸಿ ಮುನ್ನಡೆಯುತ್ತೀರೆಂದು ನಂಬಿದ್ದೇವೆ.
ವಂದನೆಗಳೊಡನೆ
ವಿಷ್ಣುಪ್ರಿಯನ್, ಚಲನಚಿತ್ರ ನಿರ್ದೇಶಕ ಹಾಗು ನಿರ್ಮಾಪಕ.
ಹಾಗು ವಿಷ್ಣು ಕನ್ನಡಾಭಿಮಾನಿಗಳು, ದೊಡ್ಡಬಳ್ಳಾಪುರ.
Comments