ಬಜರಂಗದಳ ಕಾರ್ಯಕರ್ತರಿಂದ ಹಿಂದೂ ಸಂಸ್ಕೃತಿಗೆ ಅವಮಾನ ಖಂಡಿಸಿ ಪ್ರತಿಭಟನೆ



ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪಾಕಿಸ್ಥಾನದಲ್ಲಿ ಬಂಧನಕ್ಕೆ ಒಳಗಾಗಿರುವ ಭಾರತದ ಕುಲಭೂಷಣ್ ಜಾದವ್ ಭೇಟಿಯ ವೇಳೆ ಅವರ ತಾಯಿ, ಪತ್ನಿಯ ಮಂಗಳ ಸೂತ್ರ, ಸಿಂಧೂರ, ಕೈಬಳೆ ತೆಗೆಸಿರುವುದನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಿಂದೂ ಸಂಸ್ಕೃತಿಯ ಪ್ರತೀಕ ಮಾಂಗಲ್ಯ, ಕುಂಕುಮ ಮತ್ತು ಕಾಲುಂಗುರವನ್ನು ತೆಗೆಸಿ ಪಾಕೀಸ್ತಾನ ತನ್ನ ನರಿಬುದ್ಧಿ ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಾಕಿಸ್ತಾನದ ಧ್ವಜ ಸುಟ್ಟು ದಿಕ್ಕಾರ ಕೂಗಿದರು. ಬಜರಂಗದಳ ಜಿಲ್ಲಾ ಸಂಚಾಲಕ ನರೇಶ್ ರೆಡ್ಡಿ, ತಾಲ್ಲೂಕು ಸಂಚಾಲಕ ಮಧು ಬೇಗಲಿ, ನಗರ ಸಂಚಾಲಕ ಮಹೇಶ್ ಮತ್ತಿತರರು ಹಾಜರಿದ್ದರು.
Comments