ಘಾಟಿ ದೇವಾಲಯದಲ್ಲಿ ಹುಂಡಿ ಎಣಿಕೆ, ೩೩ ಲಕ್ಷರೂ. ಸಂಗ್ರಹ
ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಗುರುವಾರದಂದು ಹುಂಡಿಯಲ್ಲಿ ಸಂಗ್ರಹವಾದ ಹಣ ಎಣಿಕೆ ಮಾಡಲಾಯಿತು, ಒಟ್ಟು ೩೩.೧೬ ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ. ಜಲದಿರಂಗಪ್ಪ ತಿಳಿಸಿದರು. ಮುಜರಾಯಿ ಇಲಾಖೆಯ ತಹಸೀಲ್ದಾರ್ ಕೆ. ಪದ್ಮ, ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಜಿ.ಎಂ. ಚನ್ನಪ್ಪ, ಸಮ್ಮುಖದಲ್ಲಿ ಹಣ ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ ೫೦೦ ರೂ. ಮುಖಬೆಲೆಯ ೧೨ ಹಳೆಯ ನೋಟುಗಳು, ಚಿನ್ನ, ಬೆಳ್ಳಿ ದೊರೆತಿದೆ. ವ್ಯವಸ್ಥಾಪಕ ಸಮಿತಿಯ ಓಬದೇನಹಳ್ಳಿ ಮುನಿಯಪ್ಪ, ನಾಗರತ್ನ, ಜಗನ್ನಾಥಾಚಾರ್, ಮುನಿರಾಜು ಹಾಜರಿದ್ದರು.
Comments