ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಟ್ಟ ಎಚ್ ಡಿಕೆ
ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಅವರಿಂದ ಇಬ್ರಾಹಿಂ ಕೊರತೆಯನ್ನು ನೀಗಿಸಿದ್ದಾರೆ ಹಾಗಂತ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ ಎಂದು ಹೇಳಿದರು. ಹಸಿವು ಮುಕ್ತ ಕರ್ನಾಟಕ ಎಂದು ಬರೀ ಬೊಗಳೆ ಬಿಡುತ್ತಿದ್ದಾರೆ, ಈ ಸರ್ಕಾರ ಬಂದ ಮೇಲೆ ರೈತರ ಆತ್ಮಹತ್ಯೆ ಭಾಗ್ಯ ದೊರಕಿದೆ.
ಅಭಿವೃದ್ಧಿಗೆ ನೀಲನಕ್ಷೆ ಮಾಡಿದರೆ ಆದಾಯದಲ್ಲಿ ಬೆಂಗಳೂರು ನಗರವನ್ನು ಹಿಂದಿಕ್ಕುವ ಶಕ್ತಿ ಮಂಗಳೂರಿಗಿದೆ ಇದಕ್ಕೆ ಅವಕಾಶ ಕಲ್ಪಿಸುವ ಜವಾಬ್ದಾರಿ ಸರ್ಕಾರಕ್ಕಿದೆ ಎಂದರು.ಸಮಾಜಕ್ಕೆ ಬೆಂಕಿ ಹಾಕುವ ಕಾರ್ಯಕ್ರಮ ನಮ್ಮಲ್ಲಿ ಇಲ್ಲ ಎಂದು ಬಿಜೆಪಿಗೆ ಮತ್ತು ಕಾಂಗ್ರೆಸ್ಗೆ ಟಾಂಗ್ ನೀಡಿದರು.ಇನ್ನು ಜನವರಿ 9 ಕ್ಕೆ ಮಂಗಳೂರಲ್ಲಿ ಜೆಡಿಎಸ್ ಸೌಹಾರ್ದ ನಡಿಗೆ ನಡೆಯಲಿದ್ದು, ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಆಯೋಜನೆ ಗೊಂಡಿದೆ ಎಂದರು.
ಕರಾವಳಿಯಲ್ಲಿ ಅಭಿವೃದ್ಧಿಗಿಂತ ಘರ್ಷಣೆ ಹೆಚ್ಚಾಗುತ್ತಿದೆ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ ಕರಾವಳಿಯಲ್ಲಿ ಸೌಹಾರ್ದವನ್ನ ಕೆಡಿಸಲಾಗುತ್ತಿದೆ.ಜೆಡಿಎಸ್ ನಿಂದ ಸೌಹಾರ್ದತೆ ಕಾಪಾಡುವ ಪ್ರಯತ್ನ ನಡೆಯಲಿದೆ ಎಂದರು.ಬೆಂಗಳೂರಿಗಿಂತ ಮಂಗಳೂರು ಹೆಚ್ಚು ಅಭಿವೃದ್ಧಿ ಕಾಣಬಹುದು, ಅಂತಾರಾಷ್ಟ್ರೀಯ ಪೋರ್ಟ್ ನಿರ್ಮಿಸಲು ಇಲ್ಲಿ ಸಾಧ್ಯ ಆದರೆ ಅದನ್ನ ಬಿಟ್ಟು ಕರಾವಳಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಇದರಿಂದ ಸಾಮಾನ್ಯ ಜನರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕಾನೂನು ನಿಯಂತ್ರಿಸಲು ಸರ್ಕಾರ ವಿಫಲ ಆಗಿದೆ.ಹಾಡಹಗಲಲ್ಲೇ ಪೊಲೀಸ್ ಕಾರಿಗೆ ಬೆಂಕಿ ಇಡುತ್ತಾರೆ ರಾಜ್ಯದ ಸಿಎಂಗೆ ಕಾನೂನು ನಿಯಂತ್ರಣ ಬೇಕಿಲ್ಲ ಬದಲು ರಜಕೀಯ ಬೇಕು ಎಂದು ಗುಡುಗಿದರು.
Comments