ಸಂಬ್ರಮ ವೈಭವದ ವೈಕುಂಠ ಏಕಾದಶಿ, ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಶ್ರೀ ಸಾಯಿಮಂದಿರ, ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ

29 Dec 2017 9:54 AM |
659 Report

ನಗರದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಬೆಳಗಿನಜಾವ ೪ಘಂಟೆಯಿಂದ ಮಹಾ ಮಂಗಳಾರತಿಯೊಂದಿಗೆ ಶ್ರೀ ಸ್ವಾಮಿಯ ದರ್ಶನ ಆರಂಭವಯಿತು, ಸಾವಿರಾರು ಭಕ್ತರು ಸಂಬ್ರಮದಿಂದ ಸರತಿ ಸಾಲಿನಲ್ಲಿ ನಿಂತು ದರ್ಶನಪಡೆದರು. ಕಾಮದಾ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದರೆ ಶ್ರೀಮನ್ನಾರಾಯಣ ವೈಕುಂಠದಿಂದ ಬಂದು ಭಕ್ತರಿಗೆ ದರುಶನದ ಭಾಗ್ಯ ಕೊಡುವ ದಿನ. ಮನುಷ್ಯರ ಪಾಪಗಳು ಶ್ರೀಹರಿಯನ್ನು ಸೇವಿಸುವುದರಿಂದ ಕಳೆಯುವ ದಿನ. ಮನುಜನ ಜೀವನದ ಪಯಣದಲಿ ಸಾಧನೆಗೆ ರಹದಾರಿ ಮಾಡಿಕೊಡುವ ದಿನ.

ಈ ದಿನ ಮನದಲಿ ಏನೇ ಸಂಕಲ್ಪಿಸಿ ಅದೇ ದಾರಿಯಲಿ ಮುಂದುವರದರೆ ಯಶ ಪಡೆಯುತ್ತಾನೆ.  ಉತ್ತರ ದ್ವಾರದಿಂದ ಸ್ವಾಮಿಯ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ ....

Edited By

Ramesh

Reported By

Ramesh

Comments