ಗೋವಿನ ರಕ್ಷಣೆಗೆ ಎಲ್ಲರೂ ಪಣತೊಡಬೇಕು
ಕೊರಟಗೆರೆ :-ಗೋವಿನ ಹಾಲನ್ನು ಕುಡಿದಿರುವ ಪ್ರತಿಯೊಬ್ಬ ಮನುಷ್ಯನು ಗೋರಕ್ಷಣೆಗಾಗಿ ಅಭಯಾಕ್ಷರಕ್ಕೆ ಹಸ್ತಾಕ್ಷರ ನೀಡುವ ಮೂಲಕ ಗೋಹತ್ಯೆಯನ್ನು ನಿಷೇಧಿಸಲು ಸಹಕಾರ ನೀಡಬೇಕು ಎಂದು ಭಾರತೀಯ ಗೋಪರಿವಾರ ರಾಜ್ಯ ಕಾರ್ಯದಶರ್ಿ ಮಧುಗೋಮತಿ ತಿಳಿಸಿದರು. ಪಟ್ಟಣದ ಎಸ್ಎಸ್ಆರ್ ಸರ್ಕಲ್ನಲ್ಲಿ ಅಭಯಾಕ್ಷರ ಅಭಿಯಾನದ ಅಡಿಯಲ್ಲಿ ಭಾರತೀಯ ಗೋಪರಿವಾರ ಮಠ ಮತ್ತು ರಾಮಚಂದ್ರಪುರ ಮಠದ ವತಿಯಿಂದ ಹಮ್ಮಿಕೊಂಡಿರುವ ಅಭಯ ಗೋಯಾತ್ರೆ ರಥಕ್ಕೆ ಬುಧವಾರ ಕೊರಟಗೆರೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಗೋವಿನ ರಕ್ಷಣೆಗೆ ಎಲ್ಲರೂ ಪಣತೊಡಬೇಕು
ಕೊರಟಗೆರೆ :-ಗೋವಿನ ಹಾಲನ್ನು ಕುಡಿದಿರುವ ಪ್ರತಿಯೊಬ್ಬ ಮನುಷ್ಯನು ಗೋರಕ್ಷಣೆಗಾಗಿ ಅಭಯಾಕ್ಷರಕ್ಕೆ ಹಸ್ತಾಕ್ಷರ ನೀಡುವ ಮೂಲಕ ಗೋಹತ್ಯೆಯನ್ನು ನಿಷೇಧಿಸಲು ಸಹಕಾರ ನೀಡಬೇಕು ಎಂದು ಭಾರತೀಯ ಗೋಪರಿವಾರ ರಾಜ್ಯ ಕಾರ್ಯದಶರ್ಿ ಮಧುಗೋಮತಿ ತಿಳಿಸಿದರು.
ಪಟ್ಟಣದ ಎಸ್ಎಸ್ಆರ್ ಸರ್ಕಲ್ನಲ್ಲಿ ಅಭಯಾಕ್ಷರ ಅಭಿಯಾನದ ಅಡಿಯಲ್ಲಿ ಭಾರತೀಯ ಗೋಪರಿವಾರ ಮಠ ಮತ್ತು ರಾಮಚಂದ್ರಪುರ ಮಠದ ವತಿಯಿಂದ ಹಮ್ಮಿಕೊಂಡಿರುವ ಅಭಯ ಗೋಯಾತ್ರೆ ರಥಕ್ಕೆ ಬುಧವಾರ ಕೊರಟಗೆರೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ಜನವರಿ 21ರಂದು ನಡೆಯುವ ಹಸ್ತಾಕ್ಷರ ಸಮಾರೋಪ ಸಮಾರಂಭದಲ್ಲಿ ರಾಘವೇಶ್ವರಭಾರತಿ ಸ್ವಾಮೀಜಿ ತಮ್ಮ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಗೋಹತ್ಯೆ ನಿಷೇದಿಸುವಂತೆ ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ರಕ್ತಾಕ್ಷರ ಕಾರ್ಯಕ್ರಮಕ್ಕೆ 108ಜನ ಸಂತರು ಮತ್ತು ಸಾವಿರಾರು ಜನ ಭಕ್ತಾಧಿಗಳ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಗೊರವನಹಳ್ಳಿ ಮಹಾಲಕ್ಷ್ಮಿದೇವಾಲಯದ ಪ್ರಧಾನ ಅರ್ಚಕ ಹೆಚ್.ಸಿ ಪ್ರಸನ್ನಕುಮಾರ್ ಮಾತನಾಡಿ ಗೋವಿನ ಹಾಲು ಕುಡಿದು ಬೆಳೆದು ಬದುಕಿವರು ನಾವು, ನಮ್ಮ ಜೀವನದ ಪ್ರತೀಹಂತದಲ್ಲೂ ಗೋವು ಉಪಕಾರಿ. ನಮ್ಮ ಆಹಾರವ್ಯವಸ್ಥೆ ಗೋವಿನ ಉತ್ಪನ್ನಗಳಿಂದ ಕೂಡಿದೆ ನಮ್ಮ ಸಕಲ ಶುಭ ಕಾರ್ಯಕ್ರಮಗಳು ಗೋವಿಲ್ಲದ ನಡೆಯುವುದಿಲ್ಲ ಎಂದು ಹೇಳಿದರು.
ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಎಸ್ಸಿ ಮೋಚರ್ಾ ಕಾರ್ಯದಶರ್ಿ ಎಂ. ಆರತಿ ಮಾತನಾಡಿ ನಮ್ಮ ಪೂರ್ವಜರು ಗೋವಿನ ಮಹತ್ವವನ್ನು ಅರಿತಿದ್ದು ಅದರಿಂದ ಸಿಗುವಂತಹ ಪ್ರತಿಯೊಂದು ವಸ್ತುವು ಮಹತ್ತರವಾದ್ದಾಗಿದ್ದು ಅದರಿಲ್ಲೂ ಗೋವಿನಲ್ಲಿ ದೈವತ್ವವನ್ನು ಕಾಣುತ್ತಿದ್ದು ಇದರ ರಕ್ಷಣೆಯನ್ನು ಜಾತಿ-ಧರ್ಮ ಭೇದವಿಲ್ಲದೇ ಎಲ್ಲರೂ ಸೇರಿ ರಕ್ಷಿಸಬೇಕು ಎಂದರು.
ಕೊರಟಗೆರೆ ಗೋಸಂರಕ್ಷಣಾ ಕಾರ್ಯಕರ್ತ ಉಮೇಶ್ಕುಮಾರ್ ಮಾತನಾಡಿ ನಮ್ಮ ದೇಶ, ನಮ್ಮ ಹಿಂದೂ ಧರ್ಮ ಗೋಮಾತೆಯನ್ನು ತಾಯಿಯನ್ನು ಪೂಜಿಸುವ ರೀತಿಯಲ್ಲಿ ಪೂಜೆ ಮಾಡುತ್ತೇವೆ. ಹೆತ್ತ ತಾಯಿ ತನ್ನ ಮಕ್ಕಳಿಗೆ 9ತಿಂಗಳು ಹಾಲು ನೀಡಿದರೇ ಗೋಮಾತೆ ತಾನೂ ಸಾಯುವರೆಗೆ ಮನುಷ್ಯನಿಗೆ ಹಾಲು ನೀಡುತ್ತದೆ ಗೋಹತ್ಯೆ ಮಾಡುತ್ತೀರುವುದು ಹೀನಾ ಕೃತ್ಯವಾಗಿದೆ ಎಂದು ಗುಡುಗಿದರು.
ತುಮಕೂರಿನಿಂದ ಕೊರಟಗೆರೆಗೆ ಆಗಮಿಸಿದ ಗೋವಧೆ ನಿಷೇದಿಸಲು ಆಗ್ರಹಿಸುವ ಅಭಯಾಕ್ಷರಕ್ಕೆ ಹಸ್ತಾಕ್ಷರ ರಥಯಾತ್ರೆಯನ್ನು ಕೊರಟಗೆರೆಗೆ ಗೋಸಂರಕ್ಷಣೆ ಕಾರ್ಯಕರ್ತರು ಬರಮಾಡಿಕೊಂಡು ಕೆಎಸ್ಆರ್ಟಿಸಿ ಬಸ್ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆಯ ಮೂಲಕ ಕರಪತ್ರವನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಗೋಹತ್ಯೆಯ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಪವನಕುಮಾರ್, ಗೋಪರಿವಾರದ ಮುಖಂಡರಾದ ಪ್ರಕಾಶ್ರೆಡ್ಡಿ, ಲಕ್ಷ್ಮೀಪ್ರಸಾದ್, ಪ್ರದೀಪಕುಮಾರ್, ಪುರುಷೋತ್ತಮ್, ಗುರುಧತ್, ಬದ್ರಿಪ್ರಸಾದ್, ಪುನಿತ್, ಕೃಷ್ಣಮೂತರ್ಿ, ಶಶಿಕುಮಾರ್, ಮುಕ್ಕಣ್ಣ, ಚಂದ್ರಣ್ಣ, ಪವನ, ಗಣೇಶ್, ಸಪ್ತಗಿರಿ, ಗೋಪಣ್ಣ, ಶಶಿಧರ, ದೇವರಾಜು, ರವಿ, ನಂಜುಂಡಿ, ಆರಾಧ್ಯ, ವಿರೋಪಾಕ್ಷ, ಆಟೋಗೋಪಿ, ಮಂಜುನಾಥ, ಇತರರು ಇದ್ದರು ( ಚಿತ್ರ ಇದೆ)
27 ಕೊರಟಗೆರೆ ಚಿತ್ರ2:- ಕೊರಟಗೆರೆ ಪಟ್ಟಣದಲ್ಲಿ ಆಭಯಾಕ್ಷರ ಅಭಿಯಾನ ಕಾರ್ಯಕ್ರಮದಲ್ಲಿ ಭಾರತೀಯ ಗೋಪರಿವಾರ ರಾಜ್ಯ ಕಾರ್ಯದಶರ್ಿ ಮಧುಗೋಮತಿ, ಪಪಂ ಸದಸ್ಯ ಪವನಕುಮಾರ್ ಸೇರಿದಂತೆ ಇತರರು ಇದ್ದರು.
Comments