ಸರ್ಕಾರಿ ಯೋಜನೆ ಬಳಸುವುದರಿಂದ ರೈತರ ಆಥರ್ಿಕ ಸೃಡತೆ: ತಹಶೀಲ್ದಾರ್ ಎಂ. ರಾಜಣ್ಣ
ಕೊರಟಗೆರೆ :-ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಂಡಿ ಆಥರ್ಿಕ ಸದೃಡತೆ ಕಾಣಬೇಕು ಎಂದು ತಹಶೀಲ್ದಾರ್ ಎಂ. ರಾಜಣ್ಣ ತಿಳಿಸಿದರು. ಪ ಣದ ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ರೈತ-ಜಾಗೃತಿ ಅಭಿಯಾನದಡಿ ಇಲಾಖೆ ಯೋಜನೆಗಳ ಮಾರುಕಟ್ಟೆ ಸಪ್ತಾಹ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರದ ರೈತರ ಹಿತದೃಷ್ಠಿಯಿಂದ ಅನೇಕ ಯೋಜನೆಗಳನ್ನು ಕೈ ಗೊಂಡಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿಯೇ ವಹಿವಾಟು ಮಾಡಿ ಉತ್ತಮ ಲಾಭಾಂಶವನ್ನು ಪಡೆಯುವಂತೆ ಸೂಚಿಸಿದರು.
ಸರ್ಕಾರಿ ಯೋಜನೆ ಬಳಸುವುದರಿಂದ ರೈತರ ಆರ್ಥಿಕ ಸೃಡತೆ: ತಹಶೀಲ್ದಾರ್ ಎಂ. ರಾಜಣ್ಣ
ಕೊರಟಗೆರೆ :-ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಂಡಿ ಆಥರ್ಿಕ ಸದೃಡತೆ ಕಾಣಬೇಕು ಎಂದು ತಹಶೀಲ್ದಾರ್ ಎಂ. ರಾಜಣ್ಣ ತಿಳಿಸಿದರು.
ಪ ಣದ ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ರೈತ-ಜಾಗೃತಿ ಅಭಿಯಾನದಡಿ ಇಲಾಖೆ ಯೋಜನೆಗಳ ಮಾರುಕಟ್ಟೆ ಸಪ್ತಾಹ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸಕರ್ಾರದ ರೈತರ ಹಿತದೃಷ್ಠಿಯಿಂದ ಅನೇಕ ಯೋಜನೆಗಳನ್ನು ಕೈ ಗೊಂಡಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿಯೇ ವಹಿವಾಟು ಮಾಡಿ ಉತ್ತಮ ಲಾಭಾಂಶವನ್ನು ಪಡೆಯುವಂತೆ ಸೂಚಿಸಿದರು.
ತಾಲ್ಲೂಕು ಕೃಷಿಮಾರುಕಟ್ಟೆ ಸಮಿತಿಯ ಅಧ್ಯಕ್ಷ ವೆಂಕಟೇಶಮೂರ್ತಿ ಮಾತನಾಡಿ ಕೃಷಿ ಮಾರುಕಟ್ಟೆ ಇಲಾಖೆಯಿಂದ ರೈತ ಸಂಜೀವಿ ಅಪಘಾತ ವಿಮಾ ಯೋಜನೆ, ಸಮಿತಿಯಲ್ಲಿ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿರುವ ಹಮಾಲರಿಗೆ ಆಮ್ ಆದ್ಮಿ ವಿಮಾ ಯೋಜನೆ, ಕಾಯಕ ನಿಧಿ ಯೋಜನೆ, ಅಡಮಾನ ಸಾಲ ಯೋಜನೆ, ಕೃಷಿ ಮಾರಾಟ ವಾಹಿನಿಯಲ್ಲಿ ಪ್ರತಿದಿನ ಕೃಷಿ ಉತ್ಪನ್ನಗಳ ಧಾರಣೆಯನ್ನು ದಾಖಲಿಸುವುದು, ಬೆಂಬಲ ಯೋಜನೆ, ಆನ್ಲೈನ್ ಮಾರಾಟ ವ್ಯವಸ್ಥೆ. ಇತ್ಯಾದಿ ಕಾರ್ಯಕ್ರಮಗಳನ್ನು ರೂಪಿಸಿಲಾಗಿದ್ದು ರೈತರು ಈ ಎಲ್ಲಾ ಯೋಜಗಳಲ್ಲಿ ಪಾಲುದಾರಿಕೆಯನ್ನ ಪಡೆಯಬೇಕು ಎಂದರು.
ರಾಜ್ಯ ಸರ್ಕಾರದ ಕೃಷಿ ಮಾರುಕಟ್ಟೆ ಇಲಾಖೆಯಿಂದ ಇ-ಮಾರಾಟ ವ್ಯವಸ್ಥೆ ಕಲ್ಪಸಲಾಗಿದ್ದು, ಸ್ವಚ್ಛತೆ-ವಗೀಕರಣ ಮತ್ತು ವೈಜ್ಞಾನಿಕ ಗುಣ ವಿಶ್ಲೇಷಣೆ ಸೌಲಭ್ಯ. ಸ್ಪರ್ಥಾತ್ಮಕ ಬೆಲೆ ಮತ್ತು ನಿಖರವಾದ ತೂಕ. ಮಾರಾಟ ತಕ್ಷಣ ರೈತರ ಖಾತೆ ಹಣ ಸಂದಾಯ. ಏಕೀಕೃತ ಮಾರಾಟ ವೇದಿಕೆಯಲ್ಲಿ ವ್ಯವಹಾರ ಸುಲಭ ಮತ್ತು ಸರಳ ಹಾಗೂ ಖರೀದಿದಾರು ಸಾಕಾಣಿಕೆ ಮಾಡಲು ತಕ್ಷಣ ಇ-ಪರ್ಮಿಟ್ ಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಪ್ರತಿಯೊಬ್ಬ ರೈತರು ಪ್ರಯೋಜನಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು.
ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯದಶರ್ಿ ಕೆ.ಸಿ ದೊರೆ ಸ್ವಾಮಿ ಮಾತನಾಡಿ ರೈತರು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿಯೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆಯಿರಿ. ಕಮೀಷನ್, ದಲ್ಲಾಳಿ ನೀಡಬೇಡಿ, ಬಿಳಿಚೀಟಿ ತಿರಸ್ಕರಿ ಅಧಿಕೃತವಾಗಿ ನೀಡುವ ಲೆಕ್ಕ ತಿರುವಳಿ ಪಟ್ಟಿ ಪಡೆದುಕೊಳ್ಳಿ ಮತ್ತು ವಿದ್ಯುನ್ಮಾನ ತೂಕದ ಯಂತ್ರ ಮೂಲಕವೇ ನಿಮ್ಮ ಉತ್ಪನ್ನಗಳನ್ನು ತೂಕ ಮಾಡಿಸಬೇಕು. ಉತ್ಪನ್ನಗಳ ಬೆಲೆಗಳು ಕುಸಿತಗೊಂಡಾಗ, ಅಡಮಾನ ಸಾಲ ಯೋಜನೆಯ ಪ್ರಯೋಜನ ಪಡೆಯುವುದರ ಜೊತೆಗೆ ಮಾರಾಟ ಸಮಸ್ಯೆಗಳ ಪರಿಹಾರಕ್ಕೆ ನಮ್ಮನ್ನು ಸಂಪಕರ್ಿಸಿ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ 18004261552 ಕೃಷಿ ಮಾರುಕಟ್ಟೆ ಸಮಿತಿ, ಕೊರಟಗೆರೆ. ಸಂಪರ್ಕಿಸಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಟಿ.ಎನ್ ನಾಗರಾಜು, ರವಿಕುಮಾರ್, ಜಯರಾಮ್, ಲೋಕೇಶ್, ಬಸವರಾಜು, ಅಶ್ವತ್ಥಪ್ಪ, ರಂಗರಾಜು, ಸುರೇಶ್, ಭೀಮಯ್ಯ, ಹನುಮಯ್ಯ, ರತ್ನಮ್ಮ, ವೇದಾಂಬ, ಯಶೋಧಮ್ಮ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)
Comments