ರೈತ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಿ: ಮುರುಳೀಧರ್ ಹಾಲಪ್ಪ

28 Dec 2017 7:02 PM |
477 Report

 ರೈತ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಿ: ಮುರುಳೀಧರ್ ಹಾಲಪ್ಪ ಕೊರಟಗೆರೆ :- ದೇಶದಲ್ಲಿ ರೈತಮಹಿಳೆಯರು ಹೆಚ್ಚಿನ ಸಾಧನೆ ಮಾಡುತ್ತಿದ್ದು ರೈತ ಕೃಷಿ ಇಲಾಖೆಯ ಕೃಷಿತಜ್ಞರಿಂದ ವೈಜ್ಞಾನಿಕ ಮಾಹಿತಿ ಪಡೆಯವ ಮೂಲಕ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿ ಹೆಚ್ಚು ಇಳುವರಿ ಪಡೆಯುವ ಮೂಲಕ ಆಥರ್ಿಕವಾಗಿ ಸದೃಡರಾಗಬೇಕು ಎಂದು ರಾಜ್ಯ ಕೌಶಲ್ಯಾಭಿವೃದ್ದಿ ಅದ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ರೈತದಿನಾಚರಣೆ ಅಂಗವಾಗಿ ತಾಲೂಕು ಮಹಿಳಾ ಕಿಸಾನ್ ಘಟಕ ಏರ್ಪಡಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ರೈತ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಿ: ಮುರುಳೀಧರ್ ಹಾಲಪ್ಪ


ಕೊರಟಗೆರೆ :- ದೇಶದಲ್ಲಿ ರೈತಮಹಿಳೆಯರು ಹೆಚ್ಚಿನ ಸಾಧನೆ ಮಾಡುತ್ತಿದ್ದು ರೈತ ಕೃಷಿ ಇಲಾಖೆಯ ಕೃಷಿತಜ್ಞರಿಂದ ವೈಜ್ಞಾನಿಕ ಮಾಹಿತಿ ಪಡೆಯವ ಮೂಲಕ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿ ಹೆಚ್ಚು ಇಳುವರಿ ಪಡೆಯುವ ಮೂಲಕ ಆಥರ್ಿಕವಾಗಿ ಸದೃಡರಾಗಬೇಕು ಎಂದು ರಾಜ್ಯ ಕೌಶಲ್ಯಾಭಿವೃದ್ದಿ ಅದ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ರೈತದಿನಾಚರಣೆ ಅಂಗವಾಗಿ ತಾಲೂಕು ಮಹಿಳಾ ಕಿಸಾನ್ ಘಟಕ ಏರ್ಪಡಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿರುವ ಸುಮಾರು 130 ಕೋಟಿ ಜನಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, ಇವರ ಮೂಲ ಕಸುಬು ಕೃಷಿಯಾಗಿದ್ದು, ಪುರಷ ರೈತ ಸರಿಸಮಾನವಾಗಿ ಮಹಿಳೆಯರು ಶ್ರಮ ವಹಿಸಿ ದುಡಿಯುತ್ತಿರವುದರಿಂದ ದೇಶದ ಜನತೆಗೆ ಸಮರ್ಪಕವಾಗಿ ಆಹಾರ ಪುರೈಸಲು ಸಾಧ್ಯವಾಗುತ್ತಿದೆ, ರೈತರು ಸಹ ಕೃಷಿ ಕಾರ್ಯವನ್ನು ಬಿಟ್ಟು ನಗರ, ಪಟ್ಟಣ ಪ್ರದೇಶಗಳಿಗೆ ಉದ್ಯೋಗಗಳನ್ನು ಅರಸಿ ವಲಸೆ ಹೊರಟರೆ ತಿನ್ನಲು ಆಹಾವಿಲ್ಲದೆ ದೇಶ ಸ್ಮಶಾನವಾಗುತ್ತದೆ, ದೇಶದ ಆಳಿವು ಉಳಿವು ರೈತರ ಕೈಲಿದ್ದು ಇದನ್ನರಿತ ರಾಜ್ಯ ಕಾಂಗ್ರೆಸ್ ಸಕರ್ಾರ ರೈತರ ಹಿತ ಕಾಯಲು ಸದಾ ಸಿದ್ದವಿದ್ದು, ರೈತರ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡೆಯ ಬೇಕು ಎಂದರು.
ಆಧುನಿಕ ಬೆಳೆದಂತೆ ಕೃಷಿ ಕ್ಷೇತ್ರವು ಆದುನಿಕವಾಗಿ ಬೆಳೆಯುತ್ತಿದೆ, ಸಾವಯವ ಕೃಷಿ ಮೂಲಕೃಷಿ, ಸಂಶೋಧನಾ ಕೃಷಿಯತ್ತ ಜನ ಇನ್ನೂ ಬಾರದೆ ಮೂಢನಂಬಿಕೆ ಕೃಷಿ ಪದ್ದತಿಯಲ್ಲೆ ಇರುವುದು ಕಂಡು ಬರುತ್ತಿದ್ದು ರೈತರು ಕೃಷಿ ಲಾಭದಾಯಕವಾಗಲು ವೈಜ್ಞಾನಿಕ ಪದ್ದತಿ ಅಳವಡಿಕೆ ಅತ್ಯಗತ್ಯವಾಗಿದ್ದು ರೈತರು ಇಲಾಖಾ ಅಧಿಕಾರಿಗಳ ಸಹಕಾರ ಪಡೆಯಬೇಕು ಹಾಗೂ ರೈತ ಮಕ್ಕಳು ಶಿಕ್ಷಣ ಕಲಿತು ಕೃಷಿ ಕ್ಷೇತ್ರವನ್ನು ಬಿಟ್ಟು ವಲಸೆ ಹೋಗಿ ಉದ್ಯೋಗ ಪಡೆದು ಪಟ್ಟಣದಗಳಲ್ಲಿ ಬವಣೆ ಪಡುವುದನ್ನು ಬಿಟ್ಟು ಆಧುನಿಕ ತಂತ್ರ ಜ್ಞಾನ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಸ್ಪೂತರ್ಿಯಾಗಿ ತೆಗದುಕೊಂಡು ಸಾಧಿಸಬೇಕು ಎಂದು ಯವಕರಿಗೆ ಕರೆನೀಡಿದರು.
ತಾಲೂಕು ಮಹಿಳಾ ಕಿಸಾನ್ ಘಟಕದ ಅದ್ಯಕ್ಷೆ ವಿಜಯಲಕ್ಷ್ಮೀ ಮಾತನಾಡಿ ಮಹಿಳೆಯರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಅಪಾರ ಸಾಧನೆಮಾಡಿ ಸಾವಯವ ಕೃಷಿಕರಾಗಿ ಜನಮನ್ನಣೆ ಪಡೆದು ಮಾದರಿ ಕೃಷಿಕರಾಗಿದ್ದಾರೆ, ವಿದ್ಯಾಥರ್ಿಗಳು ಗಮನಿಸಿ ಕಾಲಹರಣ ಮಾಡದೆ ದುಡಿಮೆಯತ್ತ ಮರಳಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕೌಶಲ್ಯಾಭಿವೃದ್ದಿ ಅದ್ಯಕ್ಷ ಮುರಳೀಧರ ಹಾಲಪ್ಪ ಕೃಷಿ ಸಾಧಕರಿಗೆ ಸನ್ಮಾನ ಮಾಡಿ ಮಹಿಳಾ ಕಿನಾನ್ ಘಟಕದ ಪದಾಧಿಕಾರಿಗಳಿಗೆ ಗುರತಿನ ಚೀಟಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃಧ್ದಿ ವಿಸ್ಥರಣಾಧಿಕಾರಿ ಕೃಷ್ಣಮೂತರ್ಿ, ಕಿಸಾನ ಘಟಕದ ಜಿಲ್ಲಾಧ್ಯಕ್ಷ ಜಿ.ಎಲ್.ಗೌಡ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ವಿವಿಧ ಹೋಬಳಿ ಘಟಕದ ಪದಾದಿಕಾರಿಗಳಾದ ಅನ್ನಪೂರ್ಣ, ಮಂಗಳಗೌರಮ್ಮ, ವೀಣಾ, ರಂಗಮ್ಮ, ಮಂಜುಳಾಬಾಯಿ, ಸರೋಜಮ್ಮ, ಗಿರಿಯಮ್ಮ, ಅಲ್ಲಾಬಕಾಷ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments