ಉಪ್ಪಿ ಅನ್‌ಲಿಮಿಟೆಡ್ ಕೃತಿ ಲೋಕಾರ್ಪಣೆ
ಗಾಂಧಿಭವನದಲ್ಲಿ ಸೌರವ್ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಸದಾಶಿವ ಶೆಣೈ ರಚಿಸಿರುವ ‘ಉಪ್ಪಿ ಅನ್‌ಲಿಮಿಟೆಡ್’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಭಗವದ್ಗೀತೆಯ ಸಂದೇಶ ಓದಿ ಅದ್ಭುತವಾಗಿದೆ ಅಂಥ ಹೇಳುತ್ತೇವೆ. ರಾಜಕೀಯದಲ್ಲಿ ಪಕ್ಷ, ವ್ಯಕ್ತಿಯ ಬದಲಾಗಿ ವಿಚಾರಗಳನ್ನು ಪೂಜಿಸಿದಾಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಹೇಳಿದರು.
ಆದರೆ ಶ್ರೀಕೃಷ್ಣನನ್ನು ಐಕಾನ್ ಮಾಡಿ ಆರಾಧನೆ ಮಾಡುತ್ತಿದ್ದೆವೆಯೇ ಹೊರತು ಭಗವದ್ಗೀತೆಯಲ್ಲಿನ ಯಾರು ಪಾಲಿಸುತ್ತಿಲ್ಲ. ರಾಜಕೀಯದಲ್ಲೂ ಪಕ್ಷ ಮತ್ತು ವ್ಯಕ್ತಿ ಪೂಜೆ ಮಾಡುತ್ತಿರುವುದರಿಂದ ಸಮಾಜ ಸುಧಾರಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಕರ್ತ ಸದಾಶಿವ ಶೆಣೈ ರಚಿಸಿರುವ ಪುಸ್ತಕದಲ್ಲಿನ ವಿಚಾರಗಳನ್ನು ಮಾತ್ರ ಸ್ವೀಕರಿಸಿ. ಅದರಲ್ಲಿರುವ ಉಪೇಂದ್ರನನ್ನು ಅಲ್ಲೇ ಬಿಡಿ. ನನ್ನಲ್ಲಿನ ವಿಚಾರಗಳಲ್ಲಿ ಮೌಲ್ಯವಿದ್ದರೆ ಪ್ರಜಾಕೀಯಕ್ಕೆ ಕೈ ಜೋಡಿಸಿ 224 ಸೈನಿಕರನ್ನು ಜತೆ ಸೇರಿಸಿ ಬದಲಾವಣೆ ತರೋಣ ಎಂದು ಮನವಿ ಮಾಡಿದರು. ನನ್ನನ್ನು ಬುದ್ಧಿವಂತ ಎಲ್ಲರೂ ಹೇಳುತ್ತಾರೆ. ಆದರೆ ನಾನು ಬುದ್ಧಿವಂತ ಅಲ್ಲ. ನಾನು ಸದಾ ಖಾಲಿ ಪಾತ್ರೆ ಇದ್ದ ಹಾಗೆ. ಖಾಲಿ ಇದ್ದಾಗ ಮಾತ್ರ ಏನಾನಾದರೂ ಮಾಡಲು ಸಾಧ್ಯ. ಬೇರೆಯವರ ಆಲೋಚನೆಗಳೇ ನನಗೆ ಆಧಾರ. ಈ ಆಲೋಚನೆಗಳೇ ಪ್ರಜಾಕೀಯ ಕಟ್ಟಲು ಕಾರಣವಾಯಿತು ಎಂದರು.
Comments