ಲೋಕ ಕಲ್ಯಾಣಾರ್ಥವಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ದಿ.೯ ಜನವರಿ ೨೦೧೮ ಮಂಗಳವಾರದಂದು ಚಂಡೀ ಹೋಮ




ನಗರದ ಡಿ.ಕ್ರಾಸ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಅಯ್ಯಪ್ಪಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್, ಅನ್ನದಾನ ಸಮಿತಿ ಹಾಗೂ ಸಮಸ್ತ ಭಕ್ತಾದಿಗಳಿಂದ ದಿ. ೮-೧-೨೦೧೮ ಸೋಮವಾರ, ೯-೧-೨೦೧೮ ಮಂಗಳವಾರದಂದು ಶ್ರೀ ಮಂಜುನಾಥ ಭಟ್ಟ ವಿನಾಯಕ, ಶ್ರೀ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲ ಪ್ರಾಧ್ಯಾಪಕರು, ಅದ್ವೈತ ವೇದಾಂತ ವಿಭಾಗ, ಬೆಂ. ಇವರಿಂದ ಶ್ರೀ ಚಂಡಿ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿ. ೮-೧-೨೦೧೮ ಸೋಮವಾರ ಸಂಜೆ ೫ ರಿಂದ ವೇದಘೋಷ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹವಾಚನ, ಋತಿಗ್ವರಣ, ಕಳಶಸ್ಥಾಪನೆ, ಶ್ರೀ ರುದ್ರಪಠಣ, ಚಂಡಿಕಾ ಪೂಜಾ, ಸಪ್ತಶತೀ ಪಾರಾಯಣ.
ದಿ. ೯-೧-೨೦೧೮ ಮಂಗಳವಾರ ಬೆಳಗಿನ ಜಾವ ೪-೪೫ ರಿಂದ ಶ್ರೀ ಗಣಪತಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಮಣ್ಯ ಸ್ವಾಮಿಗಳ ಆರಾಧನೆ ನಂತರ ಸ್ಥಾಪಿತ ಕಳಶಾರಾಧನೆ, ಸಗ್ರಹಕಪೂರ್ವಕ ಶ್ರೀ ಚಂಡೀ ಹೋಮ, ಪೂರ್ಣಾಹಿತಿ, ಕುಮಾರಿ ಪೂಜೆ, ಸುಮಂಗಲಿ ಪೂಜೆಯ ನಂತರ ತೀರ್ಥಪ್ರಸಾದ ವಿನಿಯೋಗ ಇರುತ್ತದೆ.
ಮಾಹಿತಿಗೆ: ೯೯೮೬೪೯೭೪೫೫
Comments