ಜೆಡಿಎಸ್ ಸರಣಿ ಸಭೆಯಲ್ಲಿ ಎಚ್ ಡಿಕೆ ಕೈಗೊಂಡ ನಿರ್ಧಾರವೇನು?
ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್, ಪಕ್ಷದ ವಿಧಾನ ಪರಿಷತ್ ಸದಸ್ಯರಿಗೆ ವಿಶೇಷ ಜವಾಬ್ದಾರಿ ವಹಿಸಿದೆ.ಪಕ್ಷದ ಕಚೇರಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ತಯಾರಿ ಸಭೆ ನಡೆಸಿದ್ದು, ಕೋಲಾರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದರು.
ಪರಿಷತ್‌ನ 12 ಸದಸ್ಯರಿಗೆ ಚುನಾವಣೆ ಜವಾಬ್ದಾರಿ ವಹಿಸಲಾಗಿದ್ದು, ಜನವರಿಯಿಂದಲೇ ಚಟುವಟಿಕೆಯಲ್ಲಿ ತೊಡಗಲಿದ್ದಾರೆ ಎಂದು ಸಭೆಯ ನಂತರ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.ಕಲಬುರಗಿ, ಯಾದಗಿರಿ ಜಿಲ್ಲೆಗೆ ಕಾಂತರಾಜು ಮತ್ತು ಸೈಯದ್ ಮುದೀರ್ , ಬಾಗಲಕೋಟೆ, ವಿಜಯಪುರ ಜಿಲ್ಲೆಗೆ ಅಪ್ಪಾಜಿಗೌಡ, ಸಿ.ಆರ್. ಮನೋಹರ್, ಬಳ್ಳಾರಿ, ಕೊಪ್ಪಳಕ್ಕೆ ಶ್ರೀಕಂಠೇಗೌಡ ಹಾಗೂ ಉತ್ತರ ಕನ್ನಡಕ್ಕೆ ಮರಿತಿಬ್ಬೇಗೌಡರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದೇವೆ ಎಂದು ಹೇಳಿದರು.
Comments