ದೇವರಾಜನಗರದಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ರಸ್ತೆ,






ನಗರದ 19ನೇ ವಾರ್ಡ್ ದೇವರಾಜನಗರದಲ್ಲಿ ನೂತನವಾಗಿ 14ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಿಸಿರುವ ರಸ್ತೆಗೆ ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿರವರ 93 ಜನ್ಮದಿನದಂದು "ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ರಸ್ತೆ" ಎಂದು ನಾಮಕರಣ ಮಾಡಿ, ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ರಾದ ಶ್ರೀ ಕೆ.ಎಂ.ಹನುಮಂತರಾಯಪ್ಪನವರು, ವಾರ್ಡ ಸದಸ್ಯರಾದ ಕೆ.ಹೆಚ್. ವೆಂಕಟರಾಜು, ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಬಿ. ಮುದ್ದಪ್ಪ, ಬೆಂ.ಗ್ರಾ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಹೆಚ್.ಎಸ್. ಶಿವಶಂಕರ, ನಗರ ಬಿ.ಜೆ.ಪಿ.ಅಧ್ಯಕ್ಷರಾದ ಕೆ.ಹೆಚ್.ರಂಗರಾಜು, ನಗರಸಭಾ ಸದಸ್ಯ ಡಿ,ಎಂ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಜಿ.ಶ್ರೀನಿವಾಸ, ಸುಬ್ರಮಣ್ಯ ಹಾಗು ನಗರಸಭೆ ಸದಸ್ಯರುಗಳು, ಮಹಿಳಾ ಮುಖಂಡರುಗಳಾದ ಶ್ರೀಮತಿ ಯಶೋಧ, ಶ್ರೀಮತಿ ಲೀಲಾ ಮಹೇಶ, ಶ್ರೀಮತಿ ಕಮಲ, ಶ್ರೀಮತಿ ವತ್ಸಲ, ಶ್ರೀಮತಿ ಗಿರಿಜ ಹಾಜರಿದ್ದರು.
Comments