ಅದ್ದೂರಿಯಾಗಿ ಆರಂಭಗೊಂಡ ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕ ಸಂಘದ ರಜತಮಹೋತ್ಸವ ಸಮಾರಂಭ






ಶಾಸಕ ಟಿ. ವೆಂಕಟರಮಣಯ್ಯ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಪಿ.ಎ. ರಾಜ್ಯಾಧ್ಯಾಕ್ಷ ಶ್ರೀ ಶಶಿಧರ್ ಮತ್ತು ಉಪಾಧ್ಯಕ್ಷ ನಾಗೇಶ್ ಬೆಳ್ಳಿಹಬ್ಬದ ಲಾಂಛನ ಬಿಡುಗಡೆಗೊಳಿಸಿದರು. ವಸ್ತುಪ್ರದರ್ಶನ ಮಳಿಗೆಗಳನ್ನು ಶ್ರೀ ಪಂಕಜ್ ಮಾಲೀಕರು, ಬೋಲಾಸ್ ಕಲರ್ ಲ್ಯಾಬ್ ಉದ್ಘಾಟಿಸಿದರು. ಛಾಯಾಚಿತ್ರ ಪ್ರದರ್ಶನವನ್ನು ಶ್ರೀ ಟಿ.ಎಸ್. ಮಹದೇವಯ್ಯ, ವಾಣಿಜ್ಯೋದ್ಯಮಿಗಳು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎಸ್. ಪರಮೇಶ್, ಕಾರ್ಯದರ್ಶಿ, ಕೆ.ಪಿ.ಎ. ಮತ್ತು ಬಿ.ಶ್ರೀನಿವಾಸ ಅಂತರಾಷ್ಟ್ರೀಯ ಛಾಯಾಗ್ರಾಹಕರು, ಶ್ರೀ ವಿ. ಕೃಷ್ಣಪ್ಪ, ,ಮಾಜಿ ಶಾಸಕರು, ಶ್ರೀ ಹೆಚ್ ಅಪ್ಪಯ್ಯಣ್ಣ, ಅಧ್ಯಕ್ಷರು, ಬಮೂಲ್, ಶ್ರೀ ತ.ನ. ಪ್ರಭುದೇವ್, ಅಧ್ಯಕ್ಷರು, ನಗರಸಭೆ, ಡಾ. ವಿಜಯಕುಮಾರ್, ಹುಲಿಕಲ್ ನಟರಾಜ್, ಶ್ರೀ ಬಿ.ಸಿ. ಆನಂದ್ ಮತ್ತಿತರ ಗಣ್ಯರು ಹಾಜರಿದ್ದರು. ವಿಶೇಷ ಅತಿಥಿಯಾಗಿ ಕುಮಾರಿ ಅಪೇಕ್ಷ ಪುರೋಹಿತ್, ಚಿತ್ರನಟಿ ಆಗಮಿಸಿದ್ದರು.
ಛಾಯಾಗ್ರಾಹಕ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ತುಮಕೂರು, ಗೌರಿಬಿದನೂರು, ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹುಬ್ಬಳ್ಳಿ, ಶಿರಸಿ, ಗದಗ್, ಚಿತ್ರದುರ್ಗ, ದಾವಣಗೆರೆ, ಮುಂತಾದಕಡೆಗಳಿಂದ ಛಾಯಾಗ್ರಾಹಕ ಬಂಧುಗಳು ಕಾರ್ಯಕ್ರಮಕ್ಕೆ ಬಂದು ಶುಭಕೋರಿದರು.
Comments