ಕೃಷಿ ಚಟುವಟಿಕೆಗಳ ಹೊಸ ಯೋಜನೆಗಳನ್ನು ಜನತೆಗೆ ತಿಳಿಸಿಕೊಡುತ್ತಿರುವ ಉಪೇಂದ್ರ
ಪ್ರಜಾಕೀಯದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ನಟ ಉಪೇಂದ್ರ ಅವರೀಗ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೀಲ್ಡಿಗೆ ಇಳಿದಿದ್ದಾರೆ. ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಜನತೆಯನನು ಸೆಳೆಯುತ್ತಿದ್ದಾರೆ.
ಈಗಾಗಲೇ ಊರು ಊರು ಪ್ರವಾಸ ಕೈಗೊಳ್ಳುತ್ತಿರುವ ಉಪೇಂದ್ರ, ದೇಶದ ಬೆನ್ನೆಲುಬು ರೈತರಿಗೂ ಸಹ ಕೃಷಿಯ ಪಾಠ ಹೇಳಿ ಕೊಡುತ್ತಿದ್ದಾರೆ. ಜನರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಮಂಗಳೂರಿನಲ್ಲಿ ಜನರಿಗೆ ಹೇಳಿದ್ದಾರೆ. ಜನರಿಗೆ ಕೃಷಿಯ ಬಗ್ಗೆ ತಿಳಿವಳಿಕೆ ಅವಶ್ಯಕ. ಕೃಷಿ ಚಟುವಟಿಕೆಗಳ ಹೊಸ ಹೊಸ ಯೋಜನೆಗಳನ್ನು ಜನತೆ ತಿಳಿದುಕೊಳ್ಳಬೇಕು. ಸರಿಯಾದ ವ್ಯವಸಾಯ, ಸಾವಯವ ಕೃಷಿ ಆರಂಭಿಸಿ, ಹೆಚ್ಚು ಕೆಲಸಾಗರರಿಲ್ಲದೆ ಉತ್ತಮ ಬೆಳೆ ಬೆಳೆಯುವ ಹಾದಿ ಸಾವಯವ ಕೃಷಿಯಲ್ಲಿದೆ. ನೀವು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಪಟ್ಟಿ ಮಾಡಿ. ಆದಷ್ಟು ಸಾವಯವ ಕೃಷಿಯತ್ತ ಎಲ್ಲರೂ ಮುಖ ಮಾಡಿದರೆ, ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಿದ್ದಾರೆ.
Comments