ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ೩ನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ
ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ೩ನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಬಂದಿದ್ದ ಚಿತ್ರಗಳಲ್ಲಿ ಉತ್ತವಾದ ಚಿತ್ರಗಳನ್ನು ದಿ. ೨೪ರಂದು ಕೆ.ಪಿ.ಎ. ಕಾರ್ಯಾಲಯದಲ್ಲಿ ನಡೆದ ರಾಜ್ಯದ ಹೆಸರಾಂತ ತೀರ್ಪುಗಾರರ ಸಮ್ಮುಖದಲ್ಲಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಹಿರಿಯ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಛಾಯಾಗ್ರಾಹಕರಾದ ಶ್ರೀ ಎಸ್.ಎನ್. ಸಿಂಗ್, ಶ್ರೀ ಎಸ್. ಪರಮೇಶ್. ಶ್ರೀ ಮುರಳಿ. ಶ್ರೀ ಮಂಜುನಾಥ್, ಶ್ರೀ ಕೆಂಪಣ್ಣ, ಶ್ರೀ ಸೂರ್ಯಪ್ರಕಾಶ್, ತೀರ್ಪುಗಾರರಾಗಿದ್ದರು. ಛಾಯಾಚಿತ್ರ ಸ್ಪರ್ಧೆಯ ಛೇರ್ಮನ್ ಕೆ. ಸಂಪತ್ ಕುಮಾರ್, ಕಾರ್ಯದರ್ಶಿ ಬಿ.ಎನ್. ಉಮಾಶಂಕರ್, ಎಸ್. ರವಿಕುಮಾರ್, ಎ.ಕೆ.ರಮೇಶ್, ಆಯ್ಕೆಯಲ್ಲಿ ಭಾಗವಹಿಸಿದ್ದರು.
Comments