ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವ ಡಿ.24 ರಂದು ಮಧ್ಯಾಹ್ನ 12ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು






ಸುಬ್ರಮಣ್ಯಸ್ವಾಮಿಗೆ ಸರ್ಪರೂಪದಿಂದ ನಿಜರೂಪ ಪ್ರಾಪ್ತಿಯಾಗಲು ಪಾರ್ವತಿ ಷಷ್ಠಿವ್ರತವನ್ನು ಕೈಗೊಂಡ ಹಿನ್ನಲೆಯಲ್ಲಿ ಷಷ್ಠಿ ದಿನದಂದು ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ದೇವಾಲಯದ ರಾಜಗೋಪುರ, ವಿಮಾನಗೋಪುರ. ನಾಗರಕಟ್ಟೆಗಳು, ಕ್ಷೇತ್ರದಲ್ಲಿರುವ ಕುಮಾರಧಾರ ಪುಷ್ಕರಣಿ, ಬನ್ನಿಮಂಟಪ, ಧರ್ಮ ಛತ್ರಗಳು ಭಕ್ತರ ಗಮನ ಸೆಳೆಯುತ್ತವೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬೆಂಗಳೂರು ನಗರಗಳಿಂದ ಭಕ್ತರು ಆಗಮಿಸಿದ್ದರು. ಕೆ.ಎಸ್.ಆರ್.ಟಿ.ಸಿ. ಜಾತ್ರೆಯ ಆಂಗವಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರು.
Comments