ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತಿ ವಹಿSI : ಪಿಎಸ್ಐ ಬಿ.ಸಿ ಮಂಜುನಾಥ್
ಕೊರಟಗೆರೆ :- ಶಾಲಾ ವಿದ್ಯಾಥರ್ಿಗಳು ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತಿ ವಹಿಸುವ ಮೂಲಕ ಅವರು ನೀಡುವ ತಿಂಡಿ ತಿನಿಸು, ತಂಪುಪಾನೀಯ ಮಾರು ಹೋಗಬಾರದು ಎಂದು ಪಿಎಸ್ಐ ಬಿ.ಸಿ ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮದ ಸಕರ್ಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗಳ ಹತ್ತಿರ ಬಂದು ನಯವಾಗಿ ವತರ್ಿಸಿ ನಿಮ್ಮ ಗಮನವನ್ನು ಬೇರೆಡೆ ಸೆಳೆದು ನಿಮ್ಮ ಚಿನ್ನಭರಣಗಳನ್ನು ಲಪಟಾಯಿಸುತ್ತಾರೆ. ಅವರ ಮಾತಿಗೆ ಬೆರಗಾಗದೆ ಅನುಮಾನ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡುವುದರ ಜೊತೆಗೆ ಅಕ್ಕಪಕ್ಕದ ಮನೆಯವರಿಗೆ ಅಪರಾಧ ನಡೆಯುವ ಬಗ್ಗೆ ಮಾಹಿತಿ ನೀಡಿ ಅವರಲ್ಲಿ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಕೊರಟಗೆರೆ :- ಶಾಲಾ ವಿದ್ಯಾಥರ್ಿಗಳು ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತಿ ವಹಿಸುವ ಮೂಲಕ ಅವರು ನೀಡುವ ತಿಂಡಿ ತಿನಿಸು, ತಂಪುಪಾನೀಯ ಮಾರು ಹೋಗಬಾರದು ಎಂದು ಪಿಎಸ್ಐ ಬಿ.ಸಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮದ ಸಕರ್ಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗಳ ಹತ್ತಿರ ಬಂದು ನಯವಾಗಿ ವತರ್ಿಸಿ ನಿಮ್ಮ ಗಮನವನ್ನು ಬೇರೆಡೆ ಸೆಳೆದು ನಿಮ್ಮ ಚಿನ್ನಭರಣಗಳನ್ನು ಲಪಟಾಯಿಸುತ್ತಾರೆ. ಅವರ ಮಾತಿಗೆ ಬೆರಗಾಗದೆ ಅನುಮಾನ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡುವುದರ ಜೊತೆಗೆ ಅಕ್ಕಪಕ್ಕದ ಮನೆಯವರಿಗೆ ಅಪರಾಧ ನಡೆಯುವ ಬಗ್ಗೆ ಮಾಹಿತಿ ನೀಡಿ ಅವರಲ್ಲಿ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜನ ಸಾಮಾನ್ಯರು ತಮ್ಮ ಕೆಲಸಗಳ ನಿಮಿತ್ತ ಹೊರಗೆ ಹೋದ ಸಂಧರ್ಭದಲ್ಲಿ ಅತಂಹ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು ಮನೆಯಿಂದ ಹೊರ ಹೋಗುವಂತಹ ಸಂಧರ್ಭದಲ್ಲಿ ನೆರೆ ಮನೆಯವರಿಗೆ ತಿಳಿಸಿ ಸುರಕ್ಷಿತವಾಗಿ ಮನೆಯ ಬಾಗಿಲಿಗೆ ಗ್ರಿಲ್ಡೋರ್ ಮತ್ತು ಡೋರ್ ಲಾಕರ್ಗಳನ್ನು ಆಳವಡಿ ಹೋಗುವುದು ಉತ್ತಮ ಎಂದರು.
ಹಣವನ್ನು ನಗದಾಗಿ ಸಾಗಿಸುವ ಬದಲು ಬ್ಯಾಂಕ್ ವ್ಯವಹಾರ, ಚೆಕ್ ವ್ಯವಹಾರ, ಆರ್.ಟಿ.ಜಿ.ಎಸ್ ಮೂಲಕ ವ್ಯವಹಾರ ಮಾಡುವುದು. ಅಪರಿಚಿತ ವಾಹನಗಳಲ್ಲಿ ಡ್ರಾಪ್ ಪಡೆಯುವುದಾಗಲಿ ಅಥವಾ ನೀಡುವುದಾಗಲಿ ಮಾಡಬಾರದು. ಸುಳ್ಳು ಜಾಹೀರಾತಿಗೆ ಮರುಳಾಗಿ ಆನ್ಲೈನ್ಗಳ ಮೂಲಕ ವಸ್ತಗಳುನ್ನು ಖರೀದಿಸಬೇಡಿ. ನಿಮ್ಮ ಎಟಿಎಂ ಕಾಡರ್್ ಪಿನ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾವಲು ರಹಿತ ಎಟಿಎಂ ಗಳಲ್ಲಿ ಹಣ ಪಡೆಯುವಾಗ ಜಾಗರೂಕತೆವಹಿಸುವುದು ಒಳಿತು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಪೇದೆ ತಿಪ್ಪೆಸ್ವಾಮಿ, ಪೇದೆಗಳಾದ ಲೋಹಿತ್, ತ್ರಿವೇಣಿ, ಗ್ರಾ.ಪಂ ಸದಸ್ಯರಾದ ವೆಂಕಟರೆಡ್ಡಿ, ಕೆಂಪರಾಜು, ಮುಖಂಡರಾದ ನರಸಿಂಹಮೂತರ್ಿ, ಕಂಬದ ರಂಗಯ್ಯ, ರವಿ, ವೆಂಕಟೇಶ್,ಸೀನಪ್ಪ, ನವೀನ್ಕುಮಾರ್, ಶಾಲೆಯ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಇದ್ದರು. (ಚಿತ್ರ ಇದೆ)
ಕೊರಟಗೆರೆ ಚಿತ್ರ:- ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಪಿಎಸ್ಐ ಮಂಜುನಾಥ್ ಮಾತನಾಡುತ್ತಿರುವುದು.
EDITED/ REPORTED: RAGHAVENDRA D.M
Comments