ಡಿ.29 ಕೊರಟಗೆರೆಯಲ್ಲಿ ಮಾದಿಗರ ಜಾಗೃತಿ ಸಮಿತಿ ಪ್ರತಿಭಟನೆ
ಕೊರಟಗೆರೆ ಡಿ. :- ಮಾದಿಗರ ಜಾಗೃತಿ ಸಮಿತಿ ಮತ್ತು ಆದಿ ಜಾಂಬವ ಮಾದಿಗರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಧುಗಿರಿ ಉಪವಿಭಾಗದ ವತಿಯಿಂದ ಡಿ. 29 ರಂದು ಒಳಮೀಸಲಾತಿಗಾಗಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ ಮತ್ತು ಮಾನವ ಸರಪಳಿ ಕಾರ್ಯಕ್ರಮವನ್ನು ಬೆಳಿಗ್ಗೆ 11 ಕ್ಕೆ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಎಲ್ಲಾ ಸಂಘಟನೆಗಳು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಕ್ಕೊತ್ತಾಯಕ್ಕೆ ಒಂದುಗೂಡಬೇಕು ಎಂದು ಮಾದಿಗರ ಜಾಗೃತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. EDITED/REPORTED: RAGHAVENDRA D.M
Comments