ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕಾದರೆ ಹೋರಾಟಗಳು ಅನಿವಾರ್ಯ: ಜಿಲ್ಲಾ ಸಂಚಾಲಕ ಡಾ. ಲಕ್ಷ್ಮೀಕಾಂತ್
ಕೊರಟಗೆರೆ ಡಿ. 24:- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕಾದರೆ ಹೋರಾಟಗಳು ಅನಿವಾರ್ಯ ಎಂದು ಸದಾಶಿವ ಆಯೋಗದ ಜಾರಿ ಸಮಿತಿಯ ಹಕ್ಕೋತ್ತಾಯದ ಜಿಲ್ಲಾ ಸಂಚಾಲಕ ಡಾ. ಲಕ್ಷ್ಮೀಕಾಂತ್ ತಿಳಿಸಿದರು. ಮಾದಿಗ ಜನಾಂಗ ಒಳಮೀಲಾತಿ ವಗರ್ೀಕರಣಕ್ಕಾಗಿ ಹೋರಾಟ ಮಾಡುವ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಾಗೃತಿ ಅರಿವು ಮಾದಿಗ ಮಾನವ ಹಕ್ಕುಗಳ ವೇದಿಕೆ ಆಯೋಜಿಸಿದ್ದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಡಿ. 24:- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕಾದರೆ ಹೋರಾಟಗಳು ಅನಿವಾರ್ಯ ಎಂದು ಸದಾಶಿವ ಆಯೋಗದ ಜಾರಿ ಸಮಿತಿಯ ಹಕ್ಕೋತ್ತಾಯದ ಜಿಲ್ಲಾ ಸಂಚಾಲಕ ಡಾ. ಲಕ್ಷ್ಮೀಕಾಂತ್ ತಿಳಿಸಿದರು.
ಮಾದಿಗ ಜನಾಂಗ ಒಳಮೀಲಾತಿ ವಗರ್ೀಕರಣಕ್ಕಾಗಿ ಹೋರಾಟ ಮಾಡುವ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಾಗೃತಿ ಅರಿವು ಮಾದಿಗ ಮಾನವ ಹಕ್ಕುಗಳ ವೇದಿಕೆ ಆಯೋಜಿಸಿದ್ದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ತಯಾರಿಗಾಗಿ ಪ್ರತೀ ಮನೆಯಿಂದ 1 ರೂ ಮತ್ತು ಒಬ್ಬರು ತಮ್ಮೊಟ್ಟಿಗೆ ಕೈಜೋಡಿಸಿ ಸಂಘಟನೆಗೊಳ್ಳಬೇಕು ಎಲ್ಲರೂ ಸೇರಿ ಒಗ್ಗಟ್ಟನ್ನು ಪ್ರದಶರ್ಿಸಬೇಕಿದೆ ಎಂದರು.
ಸದಾಶಿವ ಆಯೋಗದ ಅನುಷ್ಠಾನದಿಂದ ಕೇವಲ ಮಾದಿಗ ಸಮುದಾಯಕ್ಕೆ ಮಾತ್ರವಲ್ಲ ಎಲ್ಲಾ ಒಬಿಸಿ ಸಮುದಾಯಕ್ಕೆ ಒಳಿತಾಗುತ್ತದೆ ಎಂದು ಸದಾಶಿವ ಆಯೋಗದ ಸಂಚಾಲಕ ಚಿಕ್ಕೆಗುಟ್ಟೆ ವೆಂಕಟೇಶ್ ಹೇಳಿದರು.
ಮಾದಿಗ ಸಮುದಾಯ ಮಹಾಆದಿಗ ಎನ್ನುವ ಮೂಲದಿಂದ ಬಂದಿದ್ದು ಇವರು ಮೂಲ ದ್ರಾವಿಡರಾಗಿದ್ದು ಮಂಟೇಸ್ವಾಮಿ, ಮಹದೇಶ್ವರ, ಬ್ರಹದೇಶಿ ಸೇರಿದಂತೆ ಹಲವು ಮಹನೀಯರು ಈ ಸಮುದಾಯದಿಂದ ಬಂದವರಾಗಿದ್ದು ಆರ್ಯರ ದಬ್ಬಾಳಿಕೆಯಿಂದ ಸಮುದಾಯಕ್ಕೆ ಹಿನ್ನಡೆಯಾಗಿದೆ ಎಂದು ಉಪನ್ಯಾಸಕ ಡಾ. ಓ ನಾಗರಾಜಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ರವಿಕುಮಾರ್ ನಿ.ಹಾ, ಡಾ. ಮುಕುಂದಪ್ಪ, ಡಾ. ಪುಟ್ಟರಾಜು, ಆಧಿಜಾಂಬವ ತಾಲೂಕು ಅಧ್ಯಕ್ಷ ಚಿಕ್ಕರಂಗಯ್ಯ, ಚಿಕ್ಕಪ್ಪಯ್ಯ, ಮಾದಿಗ ಮಾನವ ಹಕ್ಕುಗಳ ವೇಧಿಕೆಯ ತಾಲೂಕು ಸಂಚಾಲಕ ವೆಂಕಟೇಶಮೂತರ್ಿ, ಮಾದಿಗ ದಂಡೋರದ ಜಿಲ್ಲಾ ಯುವ ಅಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು, ಮುಖಂಡರಾದ ಆನಂದ್, ಕ್ಯಾಶವಾರ ಹನುಮಂತರಾಯಪ್ಪ, ಕೃಷ್ಣಪ್ಪ, ನರಸಿಂಹಪ್ಪ, ಲಕ್ಷ್ಮಿನಸಿಂಹಮೂತರ್ಿ, ನಿವೃತ್ತ ಆರ್.ಐ ರವಿಕುಮಾರ್ ಸೇರಿದಂತೆ ತಾಲೂಕಿನ ಮಾದಿಗ ಜನಾಂಗದ ಯುವಕರು, ಸಕರ್ಾರಿ ನೌಕರರು, ಮಾದಿಗ ಸಮುದಾಯದ ಮುಖಂಡರು ಇದ್ದರು. (ಚಿತ್ರ ಇದೆ)
ಕೊರಟಗೆರೆ ಚಿತ್ರ:- ಸದಾಶಿವ ಆಯೋಗದ ಅನುಷ್ಠಾನ ಹೋರಾಟಕ್ಕಾಗಿ ಮಾದಿಗ ಮಾನವ ಹಕ್ಕುಗಳ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಂಚಾಲಕ ಡಾ. ಲಕ್ಷ್ಮಿಕಾಂತ್
Comments