ಎಸ್.ಟಿ ಸೇರ್ಪಡೆ ಸಮಿತಿಗೆ ಉಪ್ಪಾರ ಸಮುದಾಯದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಶೇಖರ ಡಿ. ಉಪ್ಪಾರ್ ಆಯ್ಕೆ
ಉಪ್ಪಾರ ಸಮುದಾಯವನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ರಾಜ್ಯ ವ್ಯಾಪಿ ನಡೆಯುತ್ತಿರುವ ಆಂದೋಲನ ಹಿನ್ನಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಎಸ್.ಟಿ ಸೇರ್ಪಡೆ ಸಮಿತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಶೇಖರ ಡಿ. ಉಪ್ಪಾರ್ ಆಯ್ಕೆಯಾಗಿದ್ದಾರೆ. ಉಪ್ಪಾರ ಸಮುದಾಯದ ಪುರುಷೋತಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ಸಮಿತಿಯು ಕಾರ್ಯನಿರ್ವಹಿಸಲಿದ್ದು, ಲಕ್ಷ್ಮಣ ಉಪ್ಪಾರ ರಾಜ್ಯಾಧ್ಯಕ್ಷರಾಗಿದ್ದಾರೆ. ಜಿಲ್ಲೆಯಲ್ಲಿ ಸಮುದಾಯದ ಸಂಘಟನೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಚಂದ್ರಶೇಖರ ಉಪ್ಪಾರ ತಿಳಿಸಿದ್ದಾರೆ.
Comments