ಬಂಡಾಯ ಶಾಸಕ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ನಾನು ಸಿಎಂ ಆಗಿದ್ದು ನಾಲ್ಕು ಮಂದಿ ರೆಬಲ್‌ಗಳಿಂದಲ್ಲ ಎಂದು ಬಂಡಾಯ ಶಾಸಕ ಚೆಲುವರಾಯಸ್ವಾಮಿ ಆರೋಪಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾವು ನಾಲ್ವರು ಕಾರಣ ಎಂಬ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಆಗ ನಮ್ಮ ಪಕ್ಷದ 58 ಶಾಸಕರಲ್ಲಿ 8 ಮಂದಿ ಸಿದ್ದರಾಮಯ್ಯ ಜತೆ ಹೋಗಿದ್ದರು. ಉಳಿದವರಲ್ಲಿ 39 ಶಾಸಕರು ನನ್ನನ್ನು ಬೆಂಬಲಿಸಿದ್ದರು. ಜತೆಗೆ ಬಿಜೆಪಿ ಬೆಂಬಲ ನೀಡಿದ್ದರಿಂದ ಮುಖ್ಯಮಂತ್ರಿಯಾದೆ. ಇವರು ನಾಲ್ವರಿಂದ ಆಗಲಿಲ್ಲ. ನಾವು ಸರ್ಕಾರ ರಚಿಸಿದ್ದರಿಂದ ಇವರೂ ಅಧಿಕಾರ ಅನುಭವಿಸಿದರು ಎಂದು ತಿರುಗೇಟು ನೀಡಿದರು.
Comments