ನೇತ್ರದಾನ 900 ಮುಟ್ಟಿದ ದೊಡ್ಡಬಳ್ಳಾಪುರದ ಕಣ್ಣಪ್ಪಗಳ ಸಂಖ್ಯೆ, ಈ ಮಹತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಗುರುದೇವ್ ರವರಿಂದ ಅಭಿನಂದನೆ

23 Dec 2017 7:19 AM |
794 Report

ದೊಡ್ಡಬಳ್ಳಾಪುರದ ಪದ್ಮಶಾಲಿ ಛತ್ರದ ಹತ್ತಿರ, ಶ್ರೀಮತಿ.ಪುಟ್ಟರತ್ನಮ್ಮ (70ವರ್ಷ) 22/12/2017 ರಂದು ವಿಧಿವಶರಾಗಿದ್ದಾರೆ.ಅವರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾದ ಸ್ವಾಮಿ ವಿವೇಕಾನಂದ ಶಾಲೆಯ ಟಿ.ವಿ.ವಿಶ್ವನಾಥ್, ಎಂ.ಎನ್.ಶಿವಶಂಕರ್, ಶರತ್ ಬಾಬು ಬಾಬು, ಡಾ.ಕಾಂತಿಮತಿ ಅಭಿಷೇಕ್ ನೇತ್ರಧಾಮದ ಡಾ.ಹರೀಶ್, ಜ್ಯೋತಿ, ಮಮತ, ಪುಷ್ಪ, ಲಕ್ಷ್ಮಿ, ಹಾಗೂ ಈ ನೇತ್ರದಾನ ಮಾಡಿದ ಕುಟುಂಬದ ಎಲ್ಲಾ ಸದಸ್ಯರಿಗೆ ಭಗವಂತನು ಒಳ್ಳೆಯದನ್ನು ಮಾಡಲಿ.ಇದು ನಮ್ಮ 900ನೇ ನೇತ್ರದಾನ. ಎಂ.ಬಿ.ಗುರುದೇವ ಛೇರ್ಮನ್, ಡಾ. ರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರ- ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ ದೊಡ್ಡಬಳ್ಳಾಪುರ.
ನೇತ್ರದಾನಕ್ಕೆ ಸಂಪರ್ಕಿಸಿ -
9742202650, 9036797177, 9902884008, 9844179963

ವರದಿ: ನಟರಾಜ್ ನಾಗದಳ

Edited By

Ramesh

Reported By

Ramesh

Comments