ದಾವಣಗೆರೆಯಲ್ಲಿ ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ ರಿ. ಇವರಿಂದ ರಾಜ್ಯ ಮಟ್ಟದ ನೇಕಾರ ಸಮಾಜದ ನಿವೃತ್ತ ನೌಕರರ ಸಮ್ಮಿಲನ

23 Dec 2017 7:05 AM |
594 Report

ಡಿ. ೨೪ ರ ಭಾನುವಾರ ಬೆಳಿಗ್ಗೆ ೧೦ ಘಂಟೆಗೆ ರಾಜ್ಯ ಮಟ್ಟದ ನೇಕಾರ ಸಮಾಜದ ನಿವೃತ್ತ ನೌಕರರ ಸಮ್ಮಿಲನ ಕಾರ್ಯಕ್ರಮವನ್ನು ದಾವಣಗೆರೆಯ ತೊಗಟವೀರ ಸಮುದಾಯ ಬವನ, ಎಂ.ಸಿ.ಸಿ. ಎ ಬ್ಲಾಕ್ ಇಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯಶ್ರೀ ಡಾ. ಈಶ್ವರಾನಂದ ಸ್ವಾಮಿಗಳು ಶ್ರೀ ಮುದನೂರು ಮಹಾ ಸಂಸ್ಥಾನ ಮಠ, ಇವರು ವಹಿಸಲಿದ್ದಾರೆ,

ಅಧ್ಯಕ್ಷತೆ: ಶ್ರೀ ಎಂ.ಡಿ. ಲಕ್ಷ್ಮೀನಾರಾಯಣ ಎಂ.ಎಲ್.ಸಿ. ಅಧ್ಯಕ್ಷರು ಕ.ರಾ.ನೇಕಾರ ಸಮುದಾಯಗಳ ಒಕ್ಕೂಟ, ಉದ್ಘಾಟನೆ: ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂ. ಅಧ್ಯಕ್ಷರಾದ ಡಾ. ಜಿ. ರಮೇಶ್, ಕ್ಯಾಲೆಂಡರ್ ಬಿಡುಗಡೆ: ಶ್ರೀ ಎಸ್.ಎಸ್. ಮಲ್ಲಿಕಾರ್ಜುನ, ಸಚಿವರು, ಕರ್ನಾಟಕ ಸರ್ಕಾರ, ನೆರವೇರಿಸುವರು.  ವಿಶೇಷ ಆಹ್ವಾನಿತರಾಗಿ ಶ್ರೀ ರವೀಂದ್ರ ಕಲ್ಬುರ್ಗಿ, ಅಧ್ಯಕ್ಷರು ಕ.ರಾ.ಕೈ.ಅ.ನಿಗಮ, ಶ್ರೀ ಗೋ. ತಿಪ್ಪೇಶ್ ಅಧ್ಯಕ್ಷರು, ಕ.ರಾ.ಜವಳಿ ಮೂಲ ಸೌಲಬ್ಯ ಅ. ನಿಗಮ ಆಗಮಿಸುವರು.

Edited By

Ramesh

Reported By

Ramesh

Comments