ಸುಸ್ವರ ಟ್ರಸ್ಟ್ ವತಿಯಿಂದ ಜನವರಿ ೬-೧-೨೦೧೮ ರಂದು ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ
ಕಳೆದ ೧೯ ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸುಸ್ವರ ಟ್ರಸ್ಟ್, ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ ೧೧-೨-೨೦೧೮ರ ಭಾನುವಾರದಂದು ಶ್ರೀ ತ್ಯಾಗರಾಜರು ಮತ್ತು ಶ್ರೀ ಪುರಂದರದಾಸರ ಆರಾಧನೆಯ ಅಂಗವಾಗಿ ದಿನಾಂಕ ೬-೧-೨೦೧೮ ಶನಿವಾರದಂದು ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆಯನ್ನು ಮದ್ಯಾನ್ಹ ೨ ಘಂಟೆಗೆ ಸ್ವಾಮಿ ವಿವೇಕಾನಂದ ಶಾಲೆ, ಮುಖ್ಯರಸ್ತೆ, ಇಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುವುದು,
೧೨ ವರ್ಷದವರೆಗೆ ಮೊದಲ ವಿಭಾಗ
೧೨-೧೮ರವರೆಗೆ ಎರಡನೆ ವಿಭಾಗ
೧೮ ವರ್ಷ ಮೇಲ್ಪಟ್ಟವರಿಗೆ ಮೂರನೆ ವಿಭಾಗ
ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುವುದು.
Comments