ಬಿಎಸ್ ವೈ ಸುಳ್ಳು ಆರೋಪಕ್ಕೆ ಕ್ಲಾಸ್ ತೆಗೆದುಕೊಂಡ ಕುಮಾರಣ್ಣ

ಕಳಸಾ ಬಂಡೂರಿ ನಾಲೆಗೆ ಅನುಮತಿ ಕೊಟ್ಟಿದ್ದೇ ನಾನು. ಆದರೆ ಬಿಎಸ್ ವೈ ನಾನು ವಿರೋಧ ವ್ಯಕ್ತಪಡಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ಅವರು ಡಬಲ್ ಗೇಮ್ ರಾಜಕಾರಣ ಮಾಡುವುದನ್ನು ಬಿಡಬೇಕಿದೆ ಎಂದು ಕ್ಲಾಸ್ ತೆಗೆದುಕೊಂಡ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಹೇಳಿದರು.
ಯಡಿಯೂರಪ್ಪ ನಿನ್ನೆ ಹುಬ್ಬಳ್ಳಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡುವಾಗ ನನ್ನ ಹೆಸರು ಪ್ರಸ್ತಾಪಿಸಿದ್ದು, ಕಳಸಾ ಬಂಡೂರಿ ನಾಲೆಗೆ ವಿರೋಧ ವ್ಯಕ್ತಪಡಿಸಿದ್ದೆ ಎಂಬ ಬಿಎಸ್ ವೈ ಆರೋಪ ಸುಳ್ಳು ಎಂದು ಕುಮಾರಸ್ವಾಮಿ ಹೇಳಿದರು.ಮಹದಾಯಿ ಸಮಸ್ಯೆ ಕುರಿತು ಬಿಜೆಪಿ ನಾಯಕರು ಡ್ರಾಮ ಮಾಡುತ್ತಿದ್ದಾರೆ, ಪ್ರಧಾನಿ ಈ ಬಗ್ಗೆ ಹೇಳಿಕೆ ಕೊಟ್ಟಿಲ್ಲ. ಜಲಸಂಪನ್ಮೂಲ ಸಚಿವರು ಈ ಬಗ್ಗೆ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿ ಈ ಕುರಿತು ಸ್ಪಂಧಿಸಬೇಕಾದ ಅಗತ್ಯ ಇದೆ ಎಂದರು.
Comments