ನುಡಿ ನಮನ: ಸ್ನೇಹ ಜೀವಿ ಗೋಪಾಲ್ ಮತ್ತೊಮ್ಮೆ ಹುಟ್ಟಿ ಬನ್ನಿ, *ನಿಮ್ಮ ನೆನಪನ್ನು ಎಂದಿಗೂ ಮರೆಯದ ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರು.*





ಸದಾ ಹಸನ್ಮುಖಿ, ಪ್ರತಿಯೊಬ್ಬರನ್ನೂ ಗೌರವಿಸುವಂತಹ ಸರಳ ಜೀವಿ ನಮ್ಮ ನೆಚ್ಚಿನ ಗೋಪಾಲ್, ಎಷ್ಟೋ ಬಾರಿ ತನಗೆ ಹಲವಾರು ಸಮಸ್ಯೆಗಳಿದ್ದರೂ, ಬೆಂಗಳೂರು ಬಂದ್ ಎಂದರೂ ಆಟೋದಲ್ಲಿ ಬಂದು ಲ್ಯಾಬ್ ಸರ್ವೀಸ್ ನೀಡಿರುವ ನಿಷ್ಠಾವಂತ ಸ್ನೇಹಿತ. ದೊಡ್ಡಬಳ್ಳಾಪುರದೊಂದಿಗೆ ನಿರಂತರ ಹದಿನೆಂಟು ವರ್ಷಗಳ ಭಾಂದವ್ಯ. ನಮ್ಮ ಜನ ಹಣ ನೀಡಲಿ, ಬಿಡಲಿ.* *ಛಾಯಾಗ್ರಾಹಕರು ಮನಬಂದಂತೆ ಅವರೊಂದಿಗೆ ಮಾತಾಡಿದರೂ ಸಹ ಬೆಸರ ಮಾಡಿಕೊಳ್ಳದೇ ತಾನಾಯ್ತು ತನ್ನ ಕೆಲಸವಾಯ್ತು ಅನ್ನುವ ವಿಶೇಷ ವ್ಯಕ್ತಿತ್ವ ಗೋಪಾಲ್, ನಮ್ಮ ದೊಡ್ಡಬಳ್ಳಾಪುರದ ಛಾಯಾಗ್ರಾಹಕ ಒಂದಷ್ಟು ಬೆಳೆದಿದ್ದಾನೆ ಅಂದರೆ ಅದಕ್ಕೆ ಕಾರಣ ಗೋಪಾಲ್ ಕೊಡುಗೆಯು ಇದೆ, ಅದು ತಾಲ್ಲೂಕಿನ ಎಲ್ಲಾ ಛಾಯಾಗ್ರಾಹಕರಿಗೂ ತಿಳಿದಿದೆ.*
ಗೋಪಾಲ್ ನೆನ್ನೆಯೂ ಎಂದಿನಂತೆ ತನ್ನ ಕೆಲಸ ಮುಗಿಸಿ ಲ್ಯಾಬ್ ಪ್ರಿಂಟ್ ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಸ್ ನಲ್ಲೇ ತೀರ್ವ ಹೃದಯಾಘಾತದಿಂದ ನಿಧನ ಹೊಂದಿದರು ನಿಜಕ್ಕೂ ಈ ವಿಚಾರ ಹೇಳಲೂ ಸಹ ಸಾಧ್ಯವಿಲ್ಲ ಅಂತಹ ನೋವಿನ ಸಂಗತಿ, ಇವರ ನಿಷ್ಠಾವಂತ ಸೇವೆ, ಸ್ನೇಹತ್ವ, ಉತ್ತಮ ವ್ಯಕ್ತಿತ್ವವನ್ನು ದೊಡ್ಡಬಳ್ಳಾಪುರದ ಛಾಯಾಗ್ರಾಹಕರು ಎಂದೂ ಮರೆಯುವಂತಿಲ್ಲ.*
ಇವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ, ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ದೈರ್ಯ ದೇವರು ನೀಡಲಿ, ಗೋಪಾಲ್ ಗೆ ನಮ್ಮ ತಾಲ್ಲೂಕಿನ ಪರವಾಗಿ ಭಾವ ಪೂರ್ಣ ಶ್ರದ್ಧಾಂಜಲಿ...*
ವರದಿ: ಹೆಚ್.ಎಸ್.ನಾಗೇಶ್. ಉಪಾಧ್ಯಕ್ಷರು, ಕೆ.ಪಿ.ಎ
Comments