ಕಾಂಗ್ರೆಸ್ , ಬಿಜೆಪಿಯ ಆಂತರಿಕ ಕಲಹದಿಂದ ಜೆಡಿಎಸ್ ಗೆ ವರದಾನ
ಗುಜರಾತ್ ಚುನಾವಣೆ ಫಲಿತಾಂಶ ಪಕ್ಷಾಂತರ ಹೊಂದುವವರ ಎದೆಯಲ್ಲಿಯೂ ಅಭದ್ರತೆ ಸೃಷ್ಟಿಸಿದೆ. ಹೀಗಾಗಿ ಕಾಂಗ್ರೆಸ್ಸಿಗಾ ಅಥವಾ ಬಿಜೆಪಿಗಾ ಎಂಬ ಗೊಂದಲದಲ್ಲಿ ಪಕ್ಷಾಂತರವಾಗಬೇಕೆನ್ನುವವರು ಇದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜೆಡಿಎಸ್ ಗೆ ಮಾತ್ರ ಇದು ದೊಡ್ಡ ವರದಾನವಾಗಿದೆ.
ಇನ್ನೂ ಗುಜರಾತ್ ಹಾಗೂ ಕರ್ನಾಟಕವನ್ನು ಗಮನಿಸಿದರೆ, ಅಲ್ಲಿಯ ಹಾಗೂ ಇಲ್ಲಿಯ ರಾಜಕೀಯ ಚಿತ್ರಣವೇ ತದ್ವಿರುದ್ಧವಾಗಿದೆ. ಗುಜರಾತ್ ನಲ್ಲಿ ಸುಮಾರು 24 ವರ್ಷಗಳಿಂದ ಆಡಳಿತ ವಿರೋಧಿ ಅಲೆಯೇ ಇಲ್ಲ. ಆದರೆ, ಕರ್ನಾಟಕದಲ್ಲಿ 1985 ರಿಂದ ಇಲ್ಲಿಯವರೆಗೂ ಒಂದೇ ಪಕ್ಷ ಸತತವಾಗಿ ಎರಡು ಬಾರಿ ಅಧಿಕಾರ ನಡೆಸಿದ ನಿದರ್ಶನವಿಲ್ಲಈ ಬಾರಿ ಕಾಂಗ್ರೆಸ್ ಗಿಂತಲೂ ಹೆಚ್ಚಾಗಿರುವ ಬಿಜೆಪಿಯ ಆಂತರಿಕ ಕಲಹ, ಆಡಳಿತ ವಿರೋಧಿ ಅಲೆಗೆ ತಾನೇ ಕೊಳ್ಳೆ ಇಡಬಹುದೇ ಎಂಬ ಅನುಮಾನವು ಸದ್ಯ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಇದಲ್ಲದೇ, ಸದ್ಯದ ಸ್ಥಿತಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದ್ದರಿಂದಾಗಿ ಜೆಡಿಎಸ್ ನಲ್ಲಿ ಹೊಸ ಹುರುಪ ಹುಟ್ಟುತ್ತಿದೆ.
Comments