ಇದೇ 23 ರಂದು ಬಿಡುಗಡೆಯಾಗಲಿದೆ ದೇವೇಗೌಡರ ಸಾಧನೆಯ ಶಿಖರಾರೋಹಣ
ಭಾರತದ ಮಾಜಿ ಪ್ರಧಾನ ಮಂತ್ರಿಗಳು ಸನ್ಮಾನ್ಯ ಎಚ್ ಡಿ ದೇವೇಗೌಡರ ಕುರಿತಂತೆ ಡಾ. ಪ್ರಧಾನ್ ಗುರುದತ್ತ ಮತ್ತು ಡಾ. ಸಿ.ನಾಗಣ್ಣ'ರವರ ಲೇಖನದಲ್ಲಿ ರಚಿಸಿರುವ "ಸಾಧನೆಯ ಶಿಖರಾರೋಹಣ"ದೇವೇಗೌಡರ ಆಡಳಿತದ ಸಾಧನೆಗಳ ಸಂಪೂರ್ಣ ಅನಾವರಣದ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ.
ಪ್ರಧಾನಿ ಅವಧಿಯಲ್ಲಿ ರೈತನ ಮಗ ಮಾಡಿದ್ದು ಏನು? ಸಿಎಂ ಆಗಿದ್ದಾಗಲೂ ಸಾಧನೆ ಮಾಡಲಿಲ್ಲ ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವ ಪುಸ್ತಕ ಸಿದ್ಧಗೊಂಡಿದೆ. ರಾಜಕೀಯ ಜೀವನದ ಏಳು-ಬೀಳುಗಳನ್ನು ವಿವರವಾಗಿ ದಾಖಲಿಸಿದ್ದೇನೆ. ಕೇವಲ 10 ತಿಂಗಳು ಹತ್ತು ದಿನ ಪಿಎಂ ಗಾದಿ ವೇಳೆ ರಾಜ್ಯಕ್ಕೆ ನೀಡಿದ ಕೊಡುಗೆ ಏನೆಂದು ಜನರಿಗೆ ತಿಳಿದಿದೆ. ಆದರೆ, ರಾಜಕೀಯ ಎದುರಾಳಿಗಳನ್ನು ಬೇರೆ ರೀತಿ ಟೀಕಿಸುತ್ತಿರುವುದಕ್ಕೆ ಪುಸ್ತಕವೇ ಉತ್ತರ ನೀಡಲಿದೆ. ದೇವೇಗೌಡರ ಆಡಳಿತದ ಸಾಧನೆಗಳ ಸಂಪೂರ್ಣ ಅನಾವರಣದ ಪುಸ್ತಕ ಬಿಡುಗಡೆ ಸಮಾರಂಭ ದೇವೇಗೌಡರ ಉಪಸ್ಥಿಯಲ್ಲಿ ದಿನಾಂಕ: 23/12/2017 ಶನಿವಾರ ಬೆಳಿಗ್ಗೆ 11:00 ಗಂಟೆಗೆ.ಸ್ಥಳ: ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನ, ಜಿ.ಕೆ.ವಿ.ಕೆ, (ಕೃಷಿ ವಿಶ್ವವಿದ್ಯಾಲಯ ಆವರಣ) ಬೆಂಗಳೂರಿನಲ್ಲಿ ನಡೆಯಲಿದೆ.
Comments