ಬೆಸ್ಕಾಂ ಮಿತ್ರ ಆಯಪ್ ಬಿಡುಗಡೆ ಮಾಡಿ ದ ಡಿಕೆ ಶಿವಕುಮಾರ್
ಬೆಸ್ಕಾಂ ಮಿತ್ರ ಆಯಪ್ ಬಿಡುಗಡೆ ಮಾಡಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ , ಕೇಂದ್ರ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ನೀಡುತ್ತಿದ್ದರೂ ನಾವು ಖರೀದಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.
ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸುತ್ತೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಒಂದು ಯೂನಿಟ್‍ಗೆ 2.50 ರೂ.ನಂತೆ ನೀಡಿದರೆ ನಾವು ಖರೀದಿಸಲು ಸಿದ್ಧ. ಆದರೆ ಈ ವಿಚಾರವಾಗಿ ಕೇವಲ ಆರೋಪ ಮಾಡಲಾಗುತ್ತಿದೆ ಎಂದರು.
ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ವೆಸಗುತ್ತಿದೆ. ಈಗಾಗಲೇ ಹಂಚಿಕೆ ಮಾಡಿರುವ ಬ್ಲಾಕ್‍ಗಳನ್ನು ಅಲಾಟ್ ಮಾಡಿ ಆದೇಶ ಹೊರಡಿಸಿಲ್ಲ. ಇಂತಹ ವಿಚಾರಗಳಿಗೆ ನಾವು ರಾಜಕೀಯ ಬೆರೆಸುವುದಿಲ್ಲ ಎಂದು ಹೇಳಿದರು. ವಿದ್ಯುತ್ ಬೆಲೆ ಏರಿಕೆ ಕುರಿತಂತೆ ಪ್ರಸ್ತಾವನೆ ಬರುವುದು ಒಂದು ನಿರಂತರ ಪ್ರಕ್ರಿಯೆ. ಈ ವರ್ಷವೂ ಪ್ರಸ್ತಾವನೆ ಬಂದಿದೆ. ಅದನ್ನು ಕೆಇಎ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಏರಿಕೆ ಮಾಡುವ ಬಗ್ಗೆ ನಿರ್ಧರಿಸುತ್ತದೆ ಎಂದರು.
Comments