‘ಪ್ರಮಾಣ ಮಾಡಿ ಟಿಕೆಟ್ ಪಡೆದುಕೊಳ್ಳಿ’ ಎಚ್ ಡಿಕೆ ಹೊಸ ಐಡಿಯಾ
`ಪ್ರಮಾಣ ಮಾಡಿ ಟಿಕೆಟ್ ಪಡೆದುಕೊಳ್ಳಿ’ ಇಂಥದೊಂದು ಹೊಸ ಐಡಿಯಾ ಪರಿಚಯಿಸಲು ಜೆಡಿಎಸ್ ಮುಂದಾಗಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಪಡೆಯಲು ಪ್ಲಾನ್ ಮಾಡಿರೋ ಜೆಡಿಎಸ್, ತನ್ನ ಪಕ್ಷದ ಅಭ್ಯರ್ಥಿಗಳನ್ನು ಮತದಾರರ ಮುಂದೆ ನಿಲ್ಲಿಸಿ ಪ್ರಮಾಣ ಮಾಡಿಸಲು ಪ್ಲಾನ್ ಮಾಡಿಕೊಂಡಿದೆ. ಭ್ರಷ್ಟಾಚಾರ ಮಾಡಲ್ಲ, ಮತದಾರರ ಕೆಲಸ ಮಾಡ್ತಿವಿ ಅಂತ ಪ್ರಮಾಣ ಮಾಡಿಸಲಿದೆ.
ಇಂಥದೊಂದು ಮಹತ್ವದ ತೀರ್ಮಾನ ಕೈಗೊಳ್ಳಲು ಶಾಸಕರ ಸಭೆ ಕರೆದಿರುವ ಎಚ್.ಡಿ.ಕುಮಾರಸ್ವಾಮಿ, ಮೊದಲ ಪಟ್ಟಿ ಬಿಡುಗಡೆಯ ಮುನ್ನ ಇಂತ ತೀರ್ಮಾನಕ್ಕೆ ಮುಂದಾಗಿದ್ದಾರೆ. ಡಿ.25 ರೊಳಗೆ 125 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಎಚ್‍ಡಿಕೆ ನಿರ್ಧಾರ ಮಾಡಿದ್ದಾರೆ.
Comments